ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರವಾಹ: ತುರ್ತುಸೇವಾ ಪಡೆಗಳಿಂದ 2,457 ಮಂದಿ ರಕ್ಷಣೆ (Emergency Service | Flood | North Karnataka)
Feedback Print Bookmark and Share
 
ಇತ್ತೀಚೆಗೆ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದ ವೇಳೆ ಅಗ್ನಿಶಾಮಕ ದಳ, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪಡೆಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು, ಒಟ್ಟು 2,457 ಮಂದಿಯನ್ನು ರಕ್ಷಿಸಿವೆ ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಐಜಿಪಿ ಎಸ್. ಸಂದು ಹೇಳಿದ್ದಾರೆ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.

ಈ ಮೂರು ಇಲಾಖೆಗಳು ಸುಮಾರು 1,500ಕ್ಕೂ ಅಧಿಕ ಸಿಬ್ಬಂದಿಗಳು, ಪ್ರವಾಹ ಪೀಡಿತ 15 ಜಿಲ್ಲೆಗಳಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೆ ಹಗಲಿರುಳು ದುಡಿದು ನೀರಿನಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಿವೆ ಎಂದು ಹೇಳಿದ ಅವರು ಪ್ರವಾಹ ಹಾಗೂ ಇತರ ಪ್ರಕೃತಿ ವಿಕೋಪಗಳನ್ನು ವ್ಯವಸ್ಥಿತವಾಗಿ ಎದುರಿಸಲು ಸಮಗ್ರ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಹಾನಿಗೀಡಾಗಿರುವ ಜಿಲ್ಲೆಗಳಲ್ಲಿನ ಕಂಟ್ರೋಲ್ ರೂಂನೊಂದಿಗಿನ ಸಂಕಪ್ಕದಿಂದಾಗಿ ರಕ್ಷಣಾ ಕಾರ್ಯದಲ್ಲಿ ನೆರವಾಗಿರುವುದಾಗಿ ಹೇಳಿತ ಅವರು ಕಾರ್ಯಾಚರಣೆ ತಂಡದಲ್ಲಿ ನುರಿತ ಈಜುಗಾರರು, ಪ್ರಥಮ ಚಿಕಿತ್ಸೆ ತಜ್ಞರು, ರಕ್ಷಣಾಪಡೆ, ಸಂಪಕ್ರ ತಜ್ಞರು, ಲಾಜಿಸ್ಟಿಕ್ಸ್ ವೃತ್ತಿಪರರು ಇದ್ದರು ಎಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ