ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಾದಯಾತ್ರೆಯಲ್ಲಿ ದಾಖಲೆ ಪ್ರಮಾಣದ ದೇಣಿಗೆ ಸಂಗ್ರಹ (Padayathra | Flood | Ydyurappa)
Feedback Print Bookmark and Share
 
ನೆರೆ ಸಂತ್ರಸ್ತರಿಗೆ ಪರಿಹಾರಾರ್ಥ ನಿಧಿಸಂಗ್ರಹಕ್ಕಾಗಿ ಮುಖ್ಯಮಂತ್ರಿಯವರು ಹಮ್ಮಿಕೊಂಡಿದ್ದ 3ನೇ ದಿನದ ಪಾದಯಾತ್ರೆಗೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸಿದ್ದು, ಸುಮಾರು 17 ಕೋಟಿ ರೂ.ಗಳು ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು-ಯುವಕರು, ವಯಸ್ಕರು ದೊಡ್ಡ ಪ್ರಮಾಣದಲ್ಲಿ ಆಗಮಿಸಿ ಸ್ವಯಂಸ್ಪೂರ್ತಿಯಿಂದ ಧನಸಹಾಯ ನೀಡುತ್ತಿದ್ದುದು ಎಲ್ಲರ ಗಮನ ಸೆಳೆಯುವಂತಿತ್ತು. ರವೀಂದ್ರನಾಥ ಠಾಗೂರ್ ನಗರದ ಗಣೇಶನ ದೇವಾಲಯದಲ್ಲಿ ಪೂಜೆ ನಡೆಸಿದ ನಂತರ ಚಾಲನೆಗೊಂಡ ಪಾದಯಾತ್ರೆಯಲ್ಲಿ ಸೇರಿಕೊಂಡ ಸಚಿವ ಆರ್.ಅಶೋಕ್ ಅವರ ಪತ್ನಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆಯನ್ನು ನೀಡುವ ಮೂಲಕ 'ಬೋಣಿ' ಮಾಡಿದರು.

ಈ ಪಾದಯಾತ್ರೆಯು ಯಶವಂತಪುರದ ಕಡೆಗೆ ಸಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರಾದ ನೆ.ಲ.ನರೇಂದ್ರಬಾಬು ಕೂಡಾ ಇದರೊಂದಿಗೆ ಸೇರಿಕೊಂಡು ಜನರಿಂದ ಸಹಾಯ ಯಾಚಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಲ್ಲೇಶ್ವರದ ವಿದ್ಯಾಮಂದಿರ ಶಾಲೆಯವರು 1 ಲಕ್ಷ ರೂ.ಗಳನ್ನು ನೀಡಿದರೆ, ಯಶವಂತಪುರದ ಎಸ್.ಕೆ.ಜುವೆಲರ್ಸ್ ಮಳಿಗೆಯು ಒಂದೂವರೆ ಲಕ್ಷ ರೂ.ಗಳನ್ನು ನೀಡಿತು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಯಡಿಯೂರಪ್ಪ, ಪರಿಹಾರ ನಿಧಿಗೆ ದೇಣಿಗೆ ನೀಡಲು ಜನರು ಬರುತ್ತಿರುವುದನ್ನು ನೋಡಿ ತಾವು ಮೂಕವಿಸ್ಮಿತರಾಗಿರುವುದಾಗಿರುವುದಾಗಿ ಹೇಳಿದ ಅವರು, ಕೇವಲ ನಾಲ್ಕೈದು ದಿನಗಳಲ್ಲಿ ಸುಮಾರು 800 ಕೋಟಿ ರೂ.ಗಳನ್ನು ಜನತೆ ನೀಡಿದ್ದಾರೆಂದರೆ ಅದು ಸಣ್ಣ ವಿಷಯವಲ್ಲ. ಸಂಗ್ರಹವಾದ ಹಣದಲ್ಲಿ ಒಂದು ಪೈಸೆಯೂ ದುರುಪಯೋಗವಾಗಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ