ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನೆರೆ ಪರಿಹಾರ ಹಣ ವಿತರಣೆಯಲ್ಲೂ ಲಂಚ ! (Yeddyurappa | BJP | Congess | Lokayuktha | Santhosh hegde)
Feedback Print Bookmark and Share
 
NRB
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಹಣ ವಿತರಿಸಲು ಗ್ರಾಮಲೆಕ್ಕಿಗರು ಲಂಚ ಕೇಳುತ್ತಿದ್ದಾರೆಂಬ ಆರೋಪಗಳು ಬಂದಿವೆ. ಪರಿಹಾರ ಹಣದ ವಿತರಣೆ ಮತ್ತು ಕಾಮಗಾರಿ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಲೋಕಾಯುಕ್ತ ತಂಡವೊಂದನ್ನು ಶೀಘ್ರವೇ ಸ್ಥಳಕ್ಕೆ ಕಳುಹಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ಬಸವನಗುಡಿ ನ್ಯಾಷನಲ್ ಪದವಿ ಕಾಲೇಜಿನ ಜರ್ನೋ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪರಿಹಾರ ವಿತರಣೆಯ ಪ್ರದೇಶಗಳಿಗೆ ತೆರಳುವ ಲೋಕಾಯುಕ್ತ ತಂಡವು ಪಬ್ಲಿಕ್ ಅಡಿಟ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಕೇವಲ ಭ್ರಷ್ಟಾಚಾರವನ್ನು ತಡೆಯುವುದು ಮಾತ್ರ ಲೋಕಾಯುಕ್ತರ ಕೆಲಸವಲ್ಲ. ದುರಾಡಳಿತದಿಂದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮ ಕೆಲಸ ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ