ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತುಂಗಾಭದ್ರಾ ನದಿಗೆ ಸೇತುವೆ ನಿರ್ಮಿಸಲು ನೆರವು: ಯಡಿಯೂರಪ್ಪ (Yeddyurappa | Andrha Pradesh | BJP | Congress)
Feedback Print Bookmark and Share
 
ಪ್ರವಾಹದ ಸಂದರ್ಭದಲ್ಲಿ ಅಪಾರ ನಷ್ಟವುಂಟಾಗಿರುವ ಮಂತ್ರಾಲಯ ಕ್ಷೇತ್ರಕ್ಕೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿದ್ದು, ಆಂಧ್ರಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಮಂತ್ರಾಲಯದ ಬಳಿ ತುಂಗಭದ್ರಾ ನದಿಗೆ ಹೊಸ ಸೇತುವೆಯೊಂದನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ರೋಸಯ್ಯನವರು ರಾಜ್ಯಕ್ಕೆ ನೀಡಿದ ಸೌಜನ್ಯದ ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಇದಕ್ಕಾಗಿ 300 ಕೋಟಿ ರೂ.ಗಳು ವೆಚ್ಚವಾಗಲಿದ್ದು, ಎರಡೂ ರಾಜ್ಯಗಳು ಈ ಯೋಜನಾ ವೆಚ್ಚವನ್ನು ಹಂಚಿಕೊಳ್ಳಲಿವೆ ಎಂದು ತಿಳಿಸಿದರು.

ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಎರಡೂ ರಾಜ್ಯಗಳು ತೀವ್ರ ಸಂಕಷ್ಟದಲ್ಲಿ ಸಿಲುಕಿವೆ ಹಾಗೂ ಹೆಚ್ಚೂ ಕಮ್ಮಿ ಒಂದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿವೆ ಎಂದು ಅಭಿಪ್ರಾಯಪಟ್ಟ ಯಡಿಯೂರಪ್ಪ, ಕೇಂದ್ರ ಸರ್ಕಾರದ ಮೇಲೆ ಉಭಯ ಸರ್ಕಾರಗಳೂ ಒತ್ತಡ ಹಾಕಿದಲ್ಲಿ ಸಮಸ್ಯೆಯ ಸುಳಿಯಿಂದ ಆದಷ್ಟು ಬೇಗ ಹೊರಬರಲು ಸಾಧ್ಯ ಎಂದು ತಿಳಿಸಿದರು.

3 ಲಕ್ಷ ಸಂಖ್ಯೆಯಲ್ಲಿ ಮನೆಗಳ ನಿರ್ಮಾಣ, ರೈತರ ಸಾಲ ಮನ್ನಾ, ನೈಸರ್ಗಿಕ ವಿಕೋಪ ಪರಿಹಾರ ದ್ವಿಗುಣಗೊಳಿಸುವುದು ಇವೇ ಮೊದಲಾದ ವಿಷಯಗಳ ಕುರಿತು ಪ್ರಧಾನಿಗಳಿಗೆ ಮನವಿ ಮಾಡಿರುವುದನ್ನು ಆಂಧ್ರ ಮುಖ್ಯಮಂತ್ರಿ ರೋಸಯ್ಯನವರ ಗಮನಕ್ಕೂ ತರಲಾಗಿದೆ ಎಂದೂ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ