ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಿಕ್ಕಾಟ ಇದ್ದಲ್ಲಿ ಬೆಂಕಿ ಬರುತ್ತೆ-ಮಳೆ ತಂಪಾಗಿಸುತ್ತೆ: ಗೌಡ ಬಣ್ಣನೆ (Deve gowda | Yeddyurappa | JDS | BJP | Janaradana Reddy)
Feedback Print Bookmark and Share
 
NRB
'ಎಲ್ಲಿ ತಿಕ್ಕಾಟ ಇರುತ್ತೋ,ಅಲ್ಲಿ ಬೆಂಕಿ ಬರುತ್ತೆ, ಬೆಂಕಿ ಜಾಸ್ತಿಯಾದಾಗ ಮಳೆ ಬರುತ್ತೆ, ಮಳೆಯಾದ ನಂತರ ಎಲ್ಲಾ ತಂಪಾಗುತ್ತೆ' ಇದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದೊಳಗೆ ಸ್ಫೋಟಗೊಂಡ ಭಿನ್ನಮತದ ಕುರಿತು ವ್ಯಕ್ತಪಡಿಸಿದ ಮಾರ್ಮಿಕ ನುಡಿ.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಳ್ಳಾರಿಯ ರೆಡ್ಡಿ ಸಹೋದರರ ನಡುವಿನ ಜಟಾಪಟಿ ಕುರಿತು ಮಂಗಳವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಿ ಇದು. ರೆಡ್ಡಿ ಸಹೋದರರು ಮತ್ತು ಯಡಿಯೂರಪ್ಪ ನಡುವೆ ಬಾಂಧವ್ಯ ಉತ್ತಮವಾಗಿಯೇ ಇತ್ತು. ಆದರೆ ಯಾಕಾಗಿ ಭಿನ್ನಮತ ಸ್ಫೋಟಗೊಂಡಿದೆ ಎಂಬುದ ನನಗೆ ಗೊತ್ತಿಲ್ಲ. ಅದು ಅವರ ಆಂತರಿಕ ವಿಚಾರ ಎಂದರು.

ಆದರೆ ಆಪರೇಶನ್ ಕಮಲದ ಮುಂಚೂಣಿಯಲ್ಲಿ ಇದ್ದವರೇ ರೆಡ್ಡಿಗಳು, ಯಡಿಯೂರಪ್ಪ ಸರ್ಕಾರಕ್ಕೆ ಶಕ್ತಿ ತುಂಬಿದವರು. ಅಲ್ಪಮತದ ಸರ್ಕಾರಕ್ಕೆ ಬಹುಮತ ಗಳಿಸಿಕೊಟ್ಟು ಸ್ಥಿರತೆ ತಂದವರು ಅವರೇ ಎಂದು ಗೌಡರು ಬಣ್ಣಿಸಿದರು.

ಬಿಜೆಪಿ ಆಂತರಿಕ ವಲಯದಲ್ಲಿ ಸ್ಫೋಟಗೊಂಡ ಭಿನ್ನಮತದ ಬಗ್ಗೆ ಹೆಚ್ಚಿಗೆ ಏನೂ ಹೇಳಲಾರೆ ಎಂದು ನಸುನಕ್ಕ ಗೌಡರು ಆ ಬಗ್ಗೆ ನಾನು ವಿವರಣೆ ನೀಡುವುದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ