ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಂತ್ರಿಗಿರಿ ಬೇಡ: ಶೆಟ್ಟರ್ ಸಿಎಂ ಆಗ್ತಾರೆ-ಕಳಕಪ್ಪ ಬಂಡಿ (Jagadeesh Shettar | BJP | Yeddyurappa | Sadananda gowda)
Feedback Print Bookmark and Share
 
'ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಅವರ ಕೊಡುಗೆ ಅಪಾರ ಎಂದಿರುವ ರೋಣ ಶಾಸಕ ಕಳಕಪ್ಪ ಬಂಡಿ, ಶೆಟ್ಟರ್ ಅವರಿಗೆ ಕಾಲ ಕೂಡಿ ಬಂದಿದೆ. ಅವರು ಸಿಎಂ ಆಗ್ಬೇಕು, ಆಗಿಯೇ ಆಗ್ತಾರೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಪೀಕರ್ ಜಗದೀಶ್ ಶೆಟ್ಟರ್ ನಿವಾಸಕ್ಕೆ ಶಾಸಕ ಕಳಕಪ್ಪ ಬಂಡಿ, ಅಭಯ್ ಪಾಟೀಲ್ ಅವರು ಗುರುವಾರ ಬೆಳಿಗ್ಗೆ ಭೇಟಿ ನೀಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ ಬಳಿಕ ಟಿವಿ9 ಜತೆ ಮಾತನಾಡಿದ ಬಂಡಿ ಈ ಅಭಿಪ್ರಾಯ ತಿಳಿಸಿದ್ದಾರೆ.

ಶೆಟ್ಟರ್ ಅವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ, ಅವರಿಗೆ ಈಗಾಗಲೇ ಸೂಕ್ತ ಸ್ಥಾನಮಾನ ಸಿಗಬೇಕಿತ್ತು. ಆ ನಿಟ್ಟಿನಲ್ಲಿ ಶೆಟ್ಟರ್‌ಗೆ ಈಗ ಕಾಲ ಕೂಡಿ ಬಂದಿದೆ. ಅವರು ಸಿಎಂ ಆಗಬೇಕಿತ್ತು. ಸಿಎಂ ಆಗಿಯೇ ಆಗುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮಾತುಕತೆಗೆ ಒಲ್ಲೆ-ಆಫರ್‌ಗೆ ನಕಾರ: ಏತನ್ಮಧ್ಯೆ ಸಚಿವರಾದ ಸುರೇಶ್ ಕುಮಾರ್, ವಿ.ಎಸ್.ಆಚಾರ್ಯ ಅವರು ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ, ನೀವು ಕೇಳುವ ಯಾವುದೇ ಖಾತೆಯನ್ನು ನೀಡಲಾಗುವುದು. ನಿಮಗೆ ಸ್ವಾತಂತ್ರ್ಯ ನೀಡಲಾಗುವುದು ಎಂದು ಕೇಳಿಕೊಂಡಿದ್ದಾರೆನ್ನಲಾಗಿದೆ.

ಆದರೆ ಶೆಟ್ಟರ್ ಅವರು ಸಚಿವರ ಕೋರಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆನ್ನಲಾಗಿದೆ. ಅಲ್ಲದೆ, ಸಿಎಂ ಜತೆ ಮಾತುಕತೆಗೂ ಕೂಡ ನಕಾರ ವ್ಯಕ್ತಪಡಿಸಿದ್ದಾರೆ. 'ನಾನು ಸಂಕಷ್ಟದಲ್ಲಿದ್ದಾಗ ಯಾರೂ ನನಗೆ ಸಹಾಯ ಮಾಡಲಿಲ್ಲ. ಆಗಲೇ ನಾನು ಸಂಪುಟಕ್ಕೆ ಸೇರಬೇಕಾಗಿತ್ತು. ಈಗ ನೀವು ಆಹ್ವಾನ ನೀಡಿ ಏನೂ ಪ್ರಯೋಜನ ಇಲ್ಲ. ಯಾಕೆಂದರೆ ನಾನು ಈಗ ಏಕಾಂಗಿಯಾಗಿ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ' ಎಂದು ಕೈಚೆಲ್ಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ