ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಿತೂರಿಗೆ ಜಗದೀಶ್ ಶೆಟ್ಟರ್ ಕಾರಣ: ಯಡಿಯೂರಪ್ಪ (BJP | Yeddyurappa | Jagadish Shettar | Janardana Reddy)
Feedback Print Bookmark and Share
 
ನಾನೇನು ತಪ್ಪು ಮಾಡಿರುವೆ ಎಂದು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ಎಂದು ಪ್ರಶ್ನಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನವೆಂಬರ್ 7ರಂದು ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ ನಡೆಸುವ ಮೂಲಕ ಜನರೆದುರು ವಾಸ್ತವಾಂಶ ಬಿಚ್ಚಿಡುತ್ತೇನೆ ಎಂದು ತಿಳಿಸಿದ್ದಾರೆ.

ನವಲಗುಂದ ತಾಲೂಕು ನೆರೆ ಪೀಡಿತ ಗುಡಿಸಾಗರ ಮತ್ತು ಅರಹಟ್ಟಿ ಸ್ಥಳಾಂತರಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತಕ್ಕೆ ಈವರೆಗೂ ತಣ್ಣಗಿನ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದ ಮುಖ್ಯಮಂತ್ರಿಗಳು ಬುಧವಾರ ರೆಡ್ಡಿ ಸಹೋದರರು ಮತ್ತು ಜಗದೀಶ್ ಶೆಟ್ಟರ್ ವಿರುದ್ಧ ಬಹಿರಂಗವಾಗಿ ಕಿಡಿಕಾರಿದರು. ಈಗಿನ ಎಲ್ಲಾ ಬೆಳವಣಿಗೆಗಳಿಗೆ ಜಗದೀಶ್ ಶೆಟ್ಟರ್ ಕಾರಣ ಎಂದು ಆರೋಪಿಸಿದ ಅವರು, ಕೆಲ ದಿನಗಳ ಹಿಂದೆಯೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗಿದ್ದನ್ನೇ ದಾಳವಾಗಿಸಿಕೊಂಡು ರೆಡ್ಡಿ ಸಹೋದರರನ್ನು ಎತ್ತಿ ಕಟ್ಟಿದ್ದಾರೆ ಎಂದು ದೂರಿದರು.

ಪಕ್ಷದಲ್ಲಿನ ಬಂಡಾಯವನ್ನು ಸವಾಲಾಗಿ ಸ್ವೀಕರಿಸಿರುವ ಅವರು ರೆಡ್ಡಿಗಳನ್ನು ಮಟ್ಟ ಹಾಕುವ ಮತ್ತು ಶೆಟ್ಟರಿಗೆ ತವರು ನೆಲ ಹುಬ್ಬಳ್ಳಿಯಲ್ಲೇ ಸಡ್ಡು ಹೊಡೆಯಲು ಮುಂದಾಗಿದ್ದಾರೆ.

'ರೆಡ್ಡಿಗಳನ್ನು ನಿಯಂತ್ರಿಸಲು ನನ್ನಲ್ಲಿ ಹಲವು ಮಾರ್ಗಗಳಿವೆ. 6ಕೋಟಿ ಜನತೆಯ ಪ್ರತಿನಿಧಿ ನಾನು. ನಾನೇನು ಅಸಹಾಯಕ ಸಿಎಂ ಅಲ್ಲ. ನನಗೂ ತಂತ್ರಗಳು ಗೊತ್ತು. ಯಾರೋ ಒಂದಷ್ಟು ಮಂದಿ ಸರ್ಕಾರವನ್ನು ಅಸ್ಥಿರಗೊಳಿಸುತ್ತಾರೆ ಎನ್ನುವುದು ಅವರ ಹುಚ್ಚು ಕಲ್ಪನೆ. ಈ ರೆಡ್ಡಿಗಳನ್ನು ನಿಯಂತ್ರಿಸದ ಹೊರತು ಸಿಎಂ ಕುರ್ಚಿಯಲ್ಲಿ ಕೂಡಲು ಆಗದು' ಎಂದು ಸಿಎಂ ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ