ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಬಿಕ್ಕಟ್ಟು ಪರಿಹಾರಕ್ಕೆ ಬಿರುಸಿನ ಸರ್ಕಸ್! (BJP | RSS | Renukacharya | Yadyurappa)
Bookmark and Share Feedback Print
 
ಬಿಜೆಪಿಯ ಭಿನ್ನಮತ ಶಮನಕ್ಕೆ ಬಿರುಸಿನ ಕಸರತ್ತು ಆರಂಭವಾಗಿದೆ. ಶನಿವಾರ ತಡರಾತ್ರಿ ಭಿನ್ನಮತೀಯರು ಹೊಟೇಲೊಂದರಲ್ಲಿ ಸಭೆ ಸೇರಿದ್ದರೂ, ಭಾನುವಾರ ಬೆಳಗ್ಗಿನ ವೇಳೆಯಲ್ಲಿ ಬಿಜೆಪಿ ಅತೃಪ್ತ ಶಾಸಕರನ್ನು ಸೇರಿಸಿ ಒಂದೆಡೆ ಸಮಾಲೋಚನೆ ನಡೆಸಿ ಮತ್ತೆ ಸರ್ಕಾರವನ್ನು ಸರಿದಾರಿಗೆ ತರುವ ಯತ್ನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬ್ಯುಸಿಯಾಗಿದ್ದಾರೆ.

ಭಾನುವಾರ ಬೆಳಗ್ಗಿನ ವೇಳೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಅತೃಪ್ತ ಶಾಸಕರು ಸಭೆ ನಡೆಸಿ ಮುಖ್ಯಮಂತ್ರಿ ಯಡಿಯೂರಪ್ಪ ಅತೃಪ್ತರ ಒಲವನ್ನು ಮತ್ತೆ ಪಡೆದಿರುವ ಸೂಚನೆ ಕಂಡು ಬಂದಿದೆ. ಸಭೆಯ ನಂತರ ರಾಜ್ಯ ಬಿಜೆಪಿ ಖಜಾಂಚಿ ಲೆಹೆರ್ ಸಿಂಗ್ ನಿವಾಸದಲ್ಲಿ ಆರ್ಎಸ್ಎಸ್ ಮುಖಂಡ ಮೈ.ಚ.ಜಯದೇವ್, ಸಂಸದ ಅನಂತಕುಮಾರ್ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಾಹ್ನದ ವೇಳೆ ಗಹನವಾದ ಸಭೆ ನಡೆಸುತ್ತಿದ್ದಾರೆ.

ನಮ್ಮ ಶಾಸಕರಲ್ಲಿ ಗೊಂದಲವಿಲ್ಲ- ಯಡ್ಡಿ: ಲೆಹೆರ್ ಸಿಂಗ್ ಅವರ ಡಾಲರ್ಸ್ ಕಾಲೊನಿಯ ನಿವಾಸಕ್ಕೆ ಆಗಮಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ನಮ್ಮ ಬತ್ತಳಿಕೆಯಲ್ಲಿ ಎಲ್ಲ ಬಾಣಗಳೂ ಇವೆ. ನಮ್ಮ ವೇಗವನ್ನು ತಡೆಯುವ ಇತರ ಪಕ್ಷಗಳ ಯಾವುದೇ ಹುನ್ನಾರಕ್ಕೂ ನಾವು ಶರಣಾಗುವುದಿಲ್ಲ. ನಮ್ಮ ಶಾಸಕರಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ವದಂತಿಗೂ ಬಿಡಿಗಾಸಿನ ಕಿಮ್ಮತ್ತೂ ಇಲ್ಲ. ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಎಲ್ಲ ರೀತಿಯಲ್ಲಿ ಅಭಿವೃದ್ಧಿಯ ರಾಜಕಾರಣ ನೀಡುತ್ತಿದೆ. ಬೆಂಗಳೂರು ಸುತ್ತಮುತ್ತೆ ಎಲ್ಲೆಡೆಯೂ ಈಗ ಅಭಿವೃದ್ಧಿ ಕಾಣುತ್ತಿದ್ದೇವೆ. ಇದನ್ನು ಪ್ರತಿಪಕ್ಷಗಳಿಗೆ ಸಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತಿಪಕ್ಷವಿರೋದೇ ಟೀಕೆ ಮಾಡಲು, ತಪ್ಪುಗಳನ್ನು ಒತ್ತಿ ಹೇಳಲು. ಆದರೆ ಬಿಜೆಪಿ ಸದೃಢವಾಗಿದೆ. ಎಲ್ಲರಲ್ಲೂ ಒಮ್ಮತವಿದೆ. ನಮ್ಮ ಶಾಸಕರಲ್ಲಿ ಯಾವುದೇ ಗೊಂದಲ ಇಲ್ಲ ಎಂಬುದು ನಾಳೆ ಅಧಿವೇಶನದಲ್ಲಿ ತಿಳಿಯಲಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ