ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಿನ್ನಮತೀಯರ ರಹಸ್ಯ ಸಭೆಯಲ್ಲ, ರಾತ್ರಿಯೂಟ ಅಷ್ಟೇ! (G.M.Siddesh | BJP | Yadyurappa)
Bookmark and Share Feedback Print
 
ಬಿಜೆಪಿ ಭಿನ್ನಮತೀಯರ ಬಣದೊಂದಿಗೆ ಶನಿವಾರ ತಡರಾತ್ರಿ ರಹಸ್ಯ ಸಭೆ ನಡೆಸಿದ ಬಳಿಕ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ ಭಾನುವಾರ ಬೆಳಗ್ಗಿನ ಜಾವ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ತೆರಳಿ ಸಮಾಲೋಚನೆ ನಡೆಸಿದ್ದು ರಾಜಕೀಯ ವಲಯದಲ್ಲಿ ಮುಂದಿನ ಬೆಳವಣಿಗೆಯ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಶೆಟ್ಟರ್ ನಿವಾಸದಲ್ಲಿ ಸಭೆ ನಡೆಯುವುದಕ್ಕೂ ಮೊದಲು ಭೇಟಿಯಿಂದ ಭಿನ್ನಮತ ಶಮನವಾಗುವ ಸೂಚನೆಗಳೂ ಲಭಿಸಿದವು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರನ್ನು ಬೆಳಿಗ್ಗೆ ಭೇಟಿಯಾಗಿದ್ದು ಕ್ಷೇತ್ರದ ಅಭಿವೃದ್ಧಿ ಹಾಗೂ ನನ್ನ ವೈಯಕ್ತಿಕ ಕೆಲವು ಸಮಸ್ಯೆಗಳ ವಿಚಾರಕ್ಕಾಗಿ. ಇದನ್ನು ಭಿನ್ನಮತದ ವಿಚಾರಕ್ಕಾಗಿ ನಡೆದ ಭೇಟಿ ಎನ್ನಬೇಡಿ. ನಾವೆಲ್ಲಾ ಒಂದೇ ಮನೆಯ ಮಕ್ಕಳು. ನಮ್ಮ ನಾಯಕ ಯಡಿಯೂರಪ್ಪ. ಸಣ್ಣಪುಟ್ಟ ತೊಂದರೆಗಳು ಮನೆಯಲ್ಲಿ ಸಾಮಾನ್ಯವೇ. ಅದನ್ನೆಲ್ಲ ಪರಿಹರಿಸುವ ಶಕ್ತಿ ಅವರಿಗಿದೆ ನಮ್ಮಲ್ಲಿ ಭಿನ್ನಮತವೇ ಇಲ್ಲ. ಶೀಘ್ರದಲ್ಲೇ ಒಬ್ಬರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.

ಹಾಗಾದರೆ, ಶನಿವಾರ ತಡರಾತ್ರಿಯವರೆಗೂ ನಡದೆ ರಹಸ್ಯ ಸಭೆಯ ಉದ್ದೇಶವೇನು ಎಂದರೆ, ನಾವು ಯಾರೊಂದಿಗೂ ಊಟ ಮಾಡಬಾರದು, ಯಾರ ಮನೆಗೂ ಹೋಗಬಾರದು ಎಂದಾಯಿತಲ್ಲ? ನಿನ್ನೆ ರಾತ್ರಿ ನಾವು ಊಟಕ್ಕಾಗಿ ಜೊತೆ ಸೇರಿದ್ದೆವಷ್ಟೆ. ಗೆಳೆಯರು ಹೊಟೇಲಿನಲ್ಲಿ ರಾತ್ರಿ ಊಟಕ್ಕೆ ಜೊತೆ ಸೇರಿದ್ರೆ ಅದಕ್ಕೆ ಭಿನ್ನಮತದ ಹೆಸರನ್ನು ಯಾಕೆ ಇಡುತ್ತೀರೋ ಅರ್ಥವಾಗುತ್ತಿಲ್ಲ ಎಂದು ರಾಗ ಬದಲಿಸಿದರು.

ಶನಿವಾರ ತಡರಾತ್ರಿ ರಹಸ್ಯ ಸಭೆ: ಬಿಜೆಪಿಯ ಕೆಲವು ಅತೃಪ್ತ ಶಾಸಕರು ಮತ್ತು ಪಕ್ಷೇತರ ಸಚಿವರು ಶನಿವಾರ ರಾತ್ರಿ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿದರು. ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಡಿ.ಸುಧಾಕರ್, ಶಿವರಾಜ್ ತಂಗಡಗಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್, ಶಾಸಕರಾದ ನಾಗರಾಜು, ವೈ.ಸಂಪಂಗಿ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ