ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನೈಸ್ ಜೊತೆ ಯಡಿಯೂರಪ್ಪ ಷಾಮೀಲು: ದೇವೇಗೌಡ (NICE | Yeddyurappa | Deve gowda | BJP | JDS)
Bookmark and Share Feedback Print
 
ನೈಸ್ ಸಂಸ್ಥೆಗೆ ಅಗತ್ಯಕ್ಕಿಂತ ಹೆಚ್ಚಿನ ಭೂಮಿ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆ ಸಂಸ್ಥೆಯೊಂದಿಗೆ ಷಾಮೀಲಾಗಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.

ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ರೈತರ ಫಲವತ್ತಾದ ಭೂಮಿಯನ್ನು ರಸ್ತೆ ಹೆಸರಲ್ಲಿ ಸ್ವಾಧೀನ ಮಾಡಿಕೊಂಡು ಕಡಿಮೆ ಬೆಲೆಗೆ ನೈಸ್ ಸಂಸ್ಥೆಗೆ ನೀಡಿರುವುದು ಜನವಿರೋಧಿಯಾಗಿದೆ. ರೈತರ ಬಗ್ಗೆ ಕಳಕಳಿ ಇದ್ದರೆ ಹೆಚ್ಚುವರಿಯಾಗಿ ನೀಡಿರುವ ಭೂಮಿಯನ್ನು ವಾಪಸ್ ಪಡೆಯಬೇಕು ಎಂದು ಗೌಡರು ಆಗ್ರಹಿಸಿದ್ದಾರೆ.

ಜನವರಿ 6ರಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಈಗಾಗಲೇ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣ ಪತ್ರಗಳಾವುದೂ ಸರಿಯಿಲ್ಲ. ಎಲ್ಲವನ್ನೂ ವಾಪಸ್ ಪಡೆಯಬೇಕೆಂದು ಸಲಹೆ ನೀಡಿದರು.

ರೈತರಿಗೆ 80ಸಾವಿರದಿಂದ 3ಲಕ್ಷ ರೂಪಾಯಿ ನೀಡಿ ಭೂಮಿಯನ್ನು ಖರೀದಿಸಿ ನೈಸ್ ಸಂಸ್ಥೆಗೆ ಸಿಎಂ ಮಾರಿದ್ದು, ಇದೀಗ ಅದೇ ಭೂಮಿಯನ್ನು ನೈಸ್ ಸಂಸ್ಥೆ ಮೂರು ಕೋಟಿಗೆ ಮಾರಾಟ ಮಾಡುತ್ತಿದೆ ಎಂದು ಗೌಡರು ದೂರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ