ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಬಿಎಂಪಿ: ವಿರೋಧ ಪಕ್ಷಗಳ ಟೀಕೆಗೆ ಸಿಎಂ ತಿರುಗೇಟು (bbmp | chief minister | yudiyurappa)
Bookmark and Share Feedback Print
 
ಬಿಬಿಎಂಟಿ ಟೆಂಡರ್ ಪ್ರಕ್ರಿಯೆ ಪೂರ್ವನಿರ್ಧರಿತವಾಗಿದ್ದು,ವಿರೋಧ ಪಕ್ಷಗಳ ಆರೋಪಗಳಲ್ಲಿ ಸತ್ಯಂಶವಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ವಿರೋಧ ಪಕ್ಷಗಳ ಆರೋಪದಂತೆ ಕಾಮಗಾರಿ ಟೆಂಡರ್‌ಗಳನ್ನು ತರಾತುರಿಯಾಗಿ ನಡೆಸಿಲ್ಲ. ಸೆಪ್ಟೆಂಬರ್ 23 ರಂದು ಅಧಿಸೂಚನೆ ಹೊರಡಿಸಲಾಗಿತ್ತು.ಡಿಸೆಂಬರ್ 8 ರಂದು ಅಂತಿಮ ಅಧಿಸೂಚನೆಯನ್ನು ನೀಡಲಾಗಿತ್ತು. ಜನೆವರಿ 8 ರಂದು ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಟೆಂಡರ್‌ ಸಲ್ಲಿಕೆಯಲ್ಲಿ ಜಾಗತಿಕ ಮಟ್ಟದ ಕಂಪೆನಿಗಳನ್ನು ಅಹ್ವಾನಿಸಲಾಗಿದ್ದರಿಂದ ಇ-ಟೆಂಡರ್ ಕರೆಯಲಾಗಿತ್ತು.ಒಟ್ಟು ಕಾಮಗಾರಿ ಮೊತ್ತ 3450 ಕೋಟಿ ರೂಪಾಯಿಗಳಾಗಿದ್ದು, ಸಂಪೂರ್ಣ ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಬಿಬಿಎಂಪಿ ಆಯುಕ್ತರಾದ ಭರತ್‌ಲಾಲ್ ಮೀನಾ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದು,ಅವರನ್ನು ಅನುಮಾನಿಸುವುದರಲ್ಲಿ ಅರ್ಥವಿಲ್ಲ. ವಿರೋಧ ಪಕ್ಷಗಳು ಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿವೆ. ಆದರೆ ಜನ ಇಂತಹ ಗೊಂದಲಗಳಿಗೆ ಸಿಲುಕುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ