ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಪರಾಧ ಸುದ್ದಿಗಳಿಗಾಗಿ ಟೆವಿ.ಚಾನೆಲ್ ಆರಂಭ (Crime news channel Police Fm radio)
Bookmark and Share Feedback Print
 
ಕೇವಲ ಅಪರಾಧ ಸುದ್ದಿಗಳಿಗಾಗಿ ಪೊಲೀಸರ ಮಾಲೀಕತ್ವದ ನೂತನ ಟಿ.ವಿ ಚಾನೆಲ್ ಮತ್ತು ಎಫ್.ಎಂ ರೇಡಿಯೋ ಶೀಘ್ರದಲ್ಲಿಯೇ ಆರಂಭವಾಗಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಏಪ್ರಿಲ್‌ನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಇವುಗಳಿಗೆ ನಗರ ಪೊಲೀಸರೇ ಮಾಲೀಕರು. ಇದು ಸಾಧ್ಯವಾದರೆ, 24 ಗಂಟೆಗಳ ಅಪರಾಧ ಸುದ್ದಿ ಪ್ರಸಾರ ಮಾಡುವಲ್ಲಿ ವಿಶ್ವದಲ್ಲಿಯೇ ಕರ್ನಾಟಕಕ್ಕೆ ಪ್ರಥಮ ಸ್ಥಾನ ಸಿಗಲಿದೆ.

ಪೊಲೀಸ್ ಆಯುಕ್ತ ಶಂಕರ ಬಿದರಿ ಈ ಯೋಜನೆಯ ಸೃಷ್ಟಿಕರ್ತ. ಪೊಲೀಸರೇ ವರದಿಗಾರರು ಹಾಗೂ ಸಂಪಾದಕರಾಗಲಿರುವ ಈ ವಾಹಿನಿಯಲ್ಲಿ ಸರ ಅಪಹರಣ, ಕೊಲೆ, ಸುಲಿಗೆ, ಸಂಚಾರ ದಟ್ಟಣೆ ಸುದ್ದಿ ಹಾಗೂ ಕಾಣೆಯಾದವರ ಮತ್ತು ಅಪಘಾತಗಳ ಕುರಿತು ರಾಷ್ಟ್ರಾದ್ಯಂತ ಮಾಹಿತಿ ತಲುಪಿದಂತಾಗುತ್ತದೆ ಎಂದು ಬಿದರಿ ಸುದ್ದಿಗಾರರಿಗೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ