ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕು: ರಾಜ್ಯಪಾಲ (Karnataka | Bangalore | BJP | Congress | Bharadwaj)
Bookmark and Share Feedback Print
 
ಗೋಹತ್ಯೆ ನಿಷೇಧ ಕಾಯ್ದೆಗೆ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಹಮತ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದಂತೆ ಪಕ್ಷಗಳಿಗೆ ಸಲಹೆ ನೀಡಿದ್ದಾರೆ.

ದೇಶದ ಗೋ ಸಂಪತ್ತು ರಕ್ಷಣೆ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಸಾಧು-ಸಂತರು ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ತರಬೇಕೆಂದು ಕೂಡ ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಜೈನ ಧರ್ಮಿಯರ ನಾಲ್ಕು ಸಂಪ್ರದಾಯಗಳನ್ನೊಳಗೊಂಡ ಸಂಘಟನೆಯಾದ ಓಸ್ವಾಲ್ ಪರಿಷತ್ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಸದ್ಭಾವನಾ ಸಮ್ಮೇಳನ ಮತ್ತು ಭಾರತೀಯ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಾಣಿ ದಯೆ ಎಂಬ ವಿಚಾರವನ್ನು ವಿಶ್ವಕ್ಕೆ ಬೋಧಿಸಿದ್ದೇ ಜೈನ ಧರ್ಮ. ಈ ಧರ್ಮ ಜೀವನ ಪರಿಶುದ್ಧತೆಯ ಸಂಕೇತ ಎಂದ ಅವರು, ಜಾತಿ, ಧರ್ಮ, ಭಾಷೆ, ಆಚಾರ-ವಿಚಾರಗಳಲ್ಲಿ ಅಗೌರವ ಸೂಚಿಸುವುದು ಸರಿಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ