ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆನ್‌ಲೈನ್ ಲಾಟರಿ : 3ನೈಜೀರಿಯಾ ವಂಚಕರ ಸೆರೆ (Nigeria | e-mail | Online | Police | Bangalore)
Bookmark and Share Feedback Print
 
ಆನ್‌ಲೈನ್ ಲಾಟರಿಯಲ್ಲಿ ಕೋಟಿಗಟ್ಟಲೆ ನಗದು ಬಹುಮಾನ ಬಂದಿದೆ ಎಂದು ಜನಸಾಮಾನ್ಯರಿಗೆ ಪಂಗನಾಮ ಹಾಕಿ ವಂಚಿಸುತ್ತಿದ್ದ ನೈಜೀರಿಯಾ ಮೂಲದ ಮೂರು ಮಂದಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ತಮಗೆ ಸಿಗುವ ಇ ಮೇಲ್ ವಿಳಾಸಗಳಿಗೆ ವಂಚಕರು, ಆನ್‌ಲೈನ್ ಲಾಟರಿಯ ಮೂಲಕ 3.50 ಕೋಟಿ ರೂ.ನಗದು ನಿಮ್ಮ ಪಾಲಾಗಿದೆ ಎಂದು ಮೊದಲು ಸಂದೇಶ ಕಳುಹಿಸುತ್ತಾರೆ. ಆ ನಂತರ ತಮ್ಮ ಮೋಸದ ಬಲೆಗೆ ಸಿಲುಕುವ ಮುಗ್ಧ ಜನರ ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿಯನ್ನು ಇ ಮೇಲ್ ಮೂಲಕವೇ ಸಂಗ್ರಹಿಸುತ್ತಾರೆ. ಅಂತಿಮವಾಗಿ ಮತ್ತೊಂದು ಮೇಲ್ ಕಳುಹಿಸುವ ವಂಚಕರು ನಿಮ್ಮ ಲಾಟರಿಯ ಮೊತ್ತ ಪಡೆಯಲು 85ಸಾವಿರ ರೂ.ಗಳನ್ನು ತೆರಿಗೆ ಕಟ್ಟಬೇಕು. ಆ ಹಣವನ್ನು ತಮ್ಮ ಅಕೌಂಟ್ ಸಂಖ್ಯೆಗೆ ವರ್ಗಾಯಿಸಲು ತಿಳಿಸಿ ತಮ್ಮ ಖಾತೆ ಸಂಖ್ಯೆಯನ್ನು ನೀಡುತ್ತಾರೆ. ಅಪ್ಪಿ ತಪ್ಪಿ ಹಣ ಕಟ್ಟಿದರೆ ಆ ದುಡ್ಡಿಗೆ ನಾಮ ಗ್ಯಾರಂಟಿ.

ಇದೇ ರೀತಿಯಲ್ಲಿ ವಂಚಕರ ಮೋಸದ ಜಾಲಕ್ಕೆ ಸಿಕ್ಕ ನಗರದ ನಿವಾಸಿಯೊಬ್ಬರು ಸೈಬರ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ನೈಜೀರಿಯಾ ಮೂಲದ ಮೂವರು ಖದೀಮರನ್ನು ಬಂಧಿಸಲಾಗಿದೆ. ಕೆಲಸಕ್ಕೆಂದು ಇಲ್ಲಿಗೆ ಬಂದವರು ವೀಸಾ ಅವದಿ ಮುಗಿದಿದ್ದರೂ ಇಲ್ಲಿಯೇ ಠಿಕಾಣಿ ಹೂಡಿ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ