ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೆಡಿಎಸ್ ವಿರುದ್ಧ ಮುನಿಸು: ಮೇಲ್ಮನೆಯಿಂದ ನಿರ್ಗಮಿಸಿದ ಸಭಾಪತಿ! (JDS | BJP | Congress | Veeranna mathikatte | Vidhana parishath)
Bookmark and Share Feedback Print
 
ಜೆಡಿಎಸ್ ಸದಸ್ಯರ ವರ್ತನೆಯಿಂದ ರೋಸಿಹೋದ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ವಿಧಾನಪರಿಷತ್‌‌ನಲ್ಲಿ ಸಭಾತ್ಯಾಗ ಮಾಡಿದ ಅಪರೂಪದ ಘಟನೆ ಬುಧವಾರ ನಡೆಯಿತು.

ಬುಧವಾರ ಮೇಲ್ಮನೆಯಲ್ಲಿ ವಿದ್ಯುತ್ ಸಮಸ್ಯೆ ಕುರಿತು ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಪ್ರಕರಣ ನಡೆಯಿತು. ವಿದ್ಯುತ್ ಸಮಸ್ಯೆ ಬಗ್ಗೆ ಜೆಡಿಎಸ್‌‌ನ ವೈ.ಎಸ್.ವಿ.ದತ್ತಾ ಚರ್ಚೆ ನಡೆಸುತ್ತಿದ್ದಾಗ, ಅದಕ್ಕೆ ಸಚಿವ ವಿ.ಎಸ್.ಆಚಾರ್ಯ ಅವರು ಸ್ಪಷ್ಟನೆ ನೀಡುತ್ತಿದ್ದರು. ಚರ್ಚೆಗಾಗಿ ದತ್ತಾಗೆ ಹತ್ತು ನಿಮಿಷ ಕಾಲ ಅವಕಾಶ ನೀಡಲಾಗಿತ್ತು. ಆದರೆ ದತ್ತಾ ಸುಮಾರು 1ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

ಕಲಾಪದಲ್ಲಿ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ ಎಂಬ ಸಭಾಪತಿಗಳ ಮನವಿಯನ್ನು ದತ್ತಾ ಅವರು ಕಿವಿಗೆ ಹಾಕಿಕೊಳ್ಳದೆ ಚರ್ಚೆಯನ್ನು ಮುಂದುವರಿಸಿದಾಗ ವೀರಣ್ಣ ಮತ್ತಿಕಟ್ಟಿ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಏತನ್ಮಧ್ಯೆ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡರು ಏರು ಧ್ವನಿ ವಿಷಯ ಪ್ರಸ್ತಾಪಿಸಲು ಮುಂದಾದಾಗ ಸಭಾಧ್ಯಕ್ಷರು ಕುಳಿತುಕೊಳ್ಳುವಂತೆ ಸೂಚಿಸಿದರು. ಆಗ ಅಸಮಾಧಾನಗೊಂಡ ಗೌಡರು, ನಾವೇನು ದನಗಳೇ...ನಮಗೂ ಮಾತನಾಡಲು ಅವಕಾಶ ಕೊಡಿ ಎಂಬ ಆಕ್ರೋಶದ ಹೇಳಿಕೆ ಮತ್ತಿಕಟ್ಟಿ ಅವರನ್ನು ಕೆರಳಿಸಿತ್ತು. ಇದರಿಂದ ಮನನೊಂದ ಅವರು ನಿಗದಿತ ಅವಧಿಗಿಂತ ಮುನ್ನವೇ ಕಲಾಪವನ್ನು ಗುರುವಾರಕ್ಕೆ ಮುಂದೂಡಿ ಸಭಾಧ್ಯಕ್ಷ ಪೀಠದಿಂದ ನಿರ್ಗಮಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ