ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾಲ್ವರು ಅಂತಾರಾಜ್ಯ ಕಳ್ಳರಿಂದ 41 ಕಾರು ವಶ (Honda city | Maruthi | Bangalore | CCB | Karnataka)
Bookmark and Share Feedback Print
 
ಹೊಂಡಾಸಿಟಿ ಸೇರಿದಂತೆ ಸುಮಾರು 2.65 ಕೋಟಿ ರೂಪಾಯಿ ಮೌಲ್ಯದ 41 ಐಷಾರಾಮಿ ಕಾರುಗಳನ್ನು ಕಳವು ಮಾಡಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಸೈಯದ್ ನೆಹಾಲ್ (35), ಬೆಂಗಳೂರಿನ ಮೋನು (28), ಛತ್ತೀಸ್‌ಗಢ ಮೂಲದ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಅವಿನಾಶ್ ಕುಮಾರ್ ಮಹೇಶ್ವರಿ (27) ಹಾಗೂ ಶಿವಮೊಗ್ಗದ ಸಮೀವುಲ್ಲಾ ಖಾನ್ (25) ಎಂಬ ನಾಲ್ವರು ಬಂಧಿತ ಕಳ್ಳರಾಗಿದ್ದಾರೆ.

ಬಂಧಿತರು ಬೆಂಗಳೂರು, ಮಹಾರಾಷ್ಟ್ರ, ಮುಂಬೈ, ಕೇರಳ ಇನ್ನಿತರ ರಾಜ್ಯಗಳಲ್ಲಿ ಕಳವು ಮಾಡಿದ್ದ 3ತವೇರಾ, 4ಕ್ವಾಲೀಸ್, 3ವರ್ಣ, 7ಸ್ಯಾಂಟ್ರೊ, 2ಹೊಂಡಾ ಸಿಟಿ, 3ಸ್ಕಾರ್ಪಿಯೋ ಸೇರಿ 41ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.

ಆರೋಪಿಗಳು ನಕಲಿ ಕೀ ಬಳಸಿ ಕಳವು ಮಾಡಿದ ಕಾರುಗಳನ್ನು ಬೆಂಗಳೂರಿನ ಚಿಕ್ಕಬಸ್ತಿಗೆ ತಂದು ವಾಹನಗಳ ಸಂಖ್ಯೆ, ಎಂಜಿನ್ ಹಾಗೂ ಚಾರ್ಸಿ ಸಂಖ್ಯೆಯನ್ನು ಬದಲಿಸಿ, ದಾಖಲೆ ಪತ್ರಗಳನ್ನು ಹೊಂದಿಸಿ ಸೆಕೆಂಡ್ ಹ್ಯಾಂಡ ವಾಹನಗಳೆಂದು ಹೇಳಿ ಮಾರಾಟ ಮಾಡುತ್ತಿದ್ದರು ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ