ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ನಿತ್ಯಾನಂದ ಸ್ವಾಮಿ ಮಹಾತ್ಮೆ'ಯ ಇನ್ನೆರಡು ಸಿಡಿಗಳಿವೆ: ಲೆನಿನ್ (Nityananda Swami | Ranjita | Lenin Karuppan | Swami sex scandal)
Bookmark and Share Feedback Print
 
ಪರಮಹಂಸ ನಿತ್ಯಾನಂದ ಸ್ವಾಮಿ ರಾಸಲೀಲೆಯಲ್ಲಿ ತೊಡಗರುವ ಇನ್ನೂ ಎರಡು ಸಿಡಿಗಳು ನನ್ನಲ್ಲಿವೆ ಎಂದು ತಮಿಳು ನಟಿ ರಂಜಿತಾ ಜತೆಗಿನ ಕಾಮಕಾಂಡದ ವಿವರಗಳನ್ನು ಬಹಿರಂಗಪಡಿಸಿದ್ದ ಮಾಜಿ ಅನುಯಾಯಿ ಧರ್ಮಾನಂದ ಆಲಿಯಾಸ್ ಲೆನಿನ್ ಕರುಪ್ಪನ್ ತಿಳಿಸಿದ್ದಾರೆ.

ನನ್ನಲ್ಲಿರುವ ಇನ್ನೂ ಎರಡು ಸಿಡಿಗಳಲ್ಲಿ ಸ್ವಾಮಿ ಪಾಲ್ಗೊಂಡಿರುವ ರಾಸಲೀಲೆಯ ಚಿತ್ರಣಗಳಿವೆ. ಅವರು ಆಶ್ರಮದ ಮಹಿಳೆಯರು ಮತ್ತು ಪುರುಷರ ಜತೆ ಹೊಂದಿದ್ದ ಸಂಬಂಧಗಳನ್ನು ಸ್ಪಷ್ಟವಾಗಿ ವಿವರಿಸುವ ಪುರಾವೆ ನನ್ನಲ್ಲಿದೆ. ಇದನ್ನು ಅಗತ್ಯ ಬಿದ್ದಾಗ ನ್ಯಾಯಾಲಯ ಮತ್ತು ಪೊಲೀಸರ ಕೈಗೆ ಒಪ್ಪಿಸುತ್ತೇನೆ ಎಂದು 'ಪ್ರಜಾವಾಣಿ'ಗೆ ಅಜ್ಞಾತ ಸ್ಥಳವೊಂದರಿಂದ ನೀಡಿರುವ ಸಂದರ್ಶನದಲ್ಲಿ ಲೆನಿನ್ ವಿವರಿಸಿದ್ದಾರೆ.

ಸಿಡಿ ಬಿಡುಗಡೆ ಬೇಡ...
ಈ ನಡುವೆ ನನ್ನಲ್ಲಿ ಮತ್ತೆರಡು ಸಿಡಿಗಳು ಇರುವುದು ನಿತ್ಯಾನಂದ ಸ್ವಾಮಿಗೆ ಖಚಿತವಾಗಿದೆ. ಹಾಗಾಗಿ ಅದನ್ನು ಬಿಡುಗಡೆ ಮಾಡುವುದು ಬೇಡ, ಮಾತುಕತೆ ಮೂಲಕ ಬಗೆಹರಿಸೋಣ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ಈ ಹಿಂದೆ ಬಿಡದಿ ಆಶ್ರಮದಲ್ಲಿ ಚಾಲಕ ಹಾಗೂ ತಾಂತ್ರಿಕ ಸಲಹೆಗಾರನಾಗಿ ಕೆಲಸ ಮಾಡಿದ್ದ ಲೆನಿನ್ ತಿಳಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
PR

ಮೂರು ಕ್ಯಾಮರಾದಿಂದ ಚಿತ್ರೀಕರಣ...
ತಾನು ಆಶ್ರಮದಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಯನ್ನು ಹೇಗೆ ಚಿತ್ರೀಕರಿಸಿದೆ ಎಂಬುದನ್ನು 'ಕ್ಯಾಮರಾಮೆನ್' ಲೆನಿನ್ ವಿವರಿಸಿದ್ದು, ಒಟ್ಟು ಮೂರು ಕಡೆ ಕ್ಯಾಮರಾಗಳನ್ನು ಇಟ್ಟಿದ್ದೆ ಎಂದು ವಿವರಣೆ ನೀಡಿದ್ದಾರೆ.

2009ರ ಡಿಸೆಂಬರ್ 23ರಿಂದ 25ರ ನಡುವೆ ಬಿಡದಿ ಆಶ್ರಮದಲ್ಲಿನ ಮಹಿಳಾ ಅನುಯಾಯಿಯೊಬ್ಬರ ನೆರವು ಪಡೆದುಕೊಂಡು ಸ್ವಾಮಿಯ ಬೆಡ್ ರೂಮ್ ಸೇರಿದಂತೆ ಮೂರು ಕಡೆ ಕ್ಯಾಮರಾ ಅಳವಡಿಸಿದ್ದೆ. ಡಿಸೆಂಬರ್ 25ರಂದು ಕ್ಯಾಮರಾಗಳಲ್ಲಿನ ಮೆಮೊರಿ ಕಾರ್ಡ್‌ಗಳನ್ನು ಸಂಗ್ರಹ ಮಾಡಿದ್ದೆ ಎಂದು ಲೆನಿನ್ ತಿಳಿಸಿದ್ದಾರೆ.

ಸಂಧಾನಕ್ಕೆ ಯತ್ನಿಸಿದ್ದರು...
ನಾನು ಚಿತ್ರೀಕರಣ ನಡೆಸಿರುವ ಕುರಿತು ಸ್ಪಷ್ಟ ಸುಳಿವು ಪಡೆದುಕೊಂಡಿದ್ದ ಸ್ವಾಮೀಜಿ ತನ್ನ ಆಪ್ತರ ಮೂಲಕ ಸಂಪರ್ಕಿಸಲು ಯತ್ನಿಸಿದರು. ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳೋಣ ಎಂಬ ಸಂಧಾನದ ಮಾತುಕತೆ ನಡೆಸಿದರೂ, ನಾನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದಿದ್ದಾರೆ.

ಅಲ್ಲದೆ ಸಿಡಿಯನ್ನು ಹೊಂದಿದ್ದ ನಾನು ಸ್ವಾಮೀಜಿಯನ್ನು ಭೇಟಿ ಮಾಡುವಂತೆ ಒತ್ತಡ ಹೇರಲಾಗುತ್ತಿತ್ತು. ಅದರಂತೆ 2010ರ ಫೆಬ್ರವರಿ 14 ಮತ್ತು 18ರಂದು ಸೇಲಂ ಬಳಿಯ ಸೀರಗಪಾಡಿಯಲ್ಲಿನ ಆಶ್ರಮದ ಕಾರ್ಯಕ್ರಮದಲ್ಲಿ ನಾನು ನಿತ್ಯಾನಂದರನ್ನು ಭೇಟಿಯಾದಾಗ ನನ್ನ ಕಪಾಳಕ್ಕೆ ಹೊಡೆದಿದ್ದ ಸ್ವಾಮಿ, ಕೊಲೆ ಬೆದರಿಕೆ ಹಾಕಿದ್ದರು ಎಂದು ವಿವರಿಸಿದ್ದಾರೆ.

ನಂತರ ಭೀತನಾಗಿದ್ದ ನಾನು ಫೆಬ್ರವರಿ 19ಕ್ಕೆ ಚೆನ್ನೈಗೆ ಹೋಗಿದ್ದೆ. ನಂತರ ಪ್ರಕರಣ ಬಹಿರಂಗವಾದಾಗ ಸಂಪರ್ಕಿಸಲು ಸ್ವಾಮೀಜಿ ಸತತ ಯತ್ನ ನಡೆಸಿದ್ದರು. ಹಲವರಿಂದ ಪ್ರಾಣ ಬೆದರಿಕೆಯೂ ಬಂದಿತ್ತು. ಆ ನಂತರ ಫೆಬ್ರವರಿ 21ರಂದು ಸ್ವಾಮೀಜಿ ಆಶ್ರಮ ತೊರೆದು ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದರು ಎಂದು ಲೆನಿನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ