ದೊಡ್ಡ ಕುಡುಕರನ್ನೂ ನಾಚಿಸುವಂತೆ, ನೀರು ಸೇರಿಸದೆ ವಿಸ್ಕಿ, ಬ್ರಾಂಡಿ ಕುಡಿಯುವ ಐದರ ಹರೆಯದ ಪೋರನ್ನು ಸ್ವತಃ ಅಬಕಾರಿ ಸಚಿವ ರೇಣುಕಾಚಾರ್ಯ ಭೇಟಿ ಮಾಡಿ ಹೌಹಾರಿದ್ದಾರೆ!
ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಹನುಮಂತಪ್ಪ ಎಂಬುವರ ಮೊಮ್ಮಗ ಈರಣ್ಣ ಐದು ವರ್ಷದ ಪೋರ ಈಗಲೇ ದೊಡ್ಡ ಕುಡುಕನಾಗಿ ಬಿಟ್ಟಿದ್ದಾನೆ.
ಈ ಚೊಟುದ್ದದ ಪೋರ ನೀರು ಬೆರಸದೆ ವಿಸ್ಕಿ, ಬ್ರಾಂಡಿ ಕುಡಿಯುವ ವಿಷಯ ತಿಳಿದ ಸಚಿವ ರೇಣುಕಾಚಾರ್ಯ ನಿನ್ನೆ ಆತನ ಮನೆಗೆ ಭೇಟಿ ನೀರು ಬೆರಸದೆ ವಿಸ್ಕಿಯನ್ನು ಕುಡಿಯಲು ಕೊಟ್ಟರು. ಅರರೇ, ನೋಡ ನೋಡುತ್ತಲೇ ಹಾಲು ಕುಡಿದಂತೆ ವಿಸ್ಕಿಯನ್ನು ಏರಿಸಿಬಿಟ್ಟಿದ್ದ!
ನಂತರ ಬಾಲಕನ ಸ್ಥಿತಿಗತಿ ವಿಚಾರಿಸಿದ ರೇಣುಕಾಚಾರ್ಯ, ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳೆದುರು ಮದ್ಯಪಾನ ಮಾಡಬಾರದು. ಇದರಿಂದ ಅವರ ಭವಿಷ್ಯ ಹಾಳಾಗಲಿದೆ ಎಂದು ಬುದ್ದಿವಾದ ಹೇಳಿದ್ದಾರೆ. ನಂತರ ಈರಣ್ಣನನ್ನು ರಿಮ್ಯಾಂಡ್ ಹೋಂಗೆ ದಾಖಲಿಸಿದರೆ ಸರ್ಕಾರದ ವತಿಯಿಂದ ಸಂಪೂರ್ಣ ವಿದ್ಯಾಭ್ಯಾಸ ಕೊಡಿಸುವುದಾಗಿ ಭರವಸೆ ನೀಡಿದರು.