ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಾಸನ: ಕಳ್ಳನ ಪ್ರೇಮಪಾಶಕ್ಕೆ ಬಿದ್ದ ಮಹಿಳಾ ಪೊಲೀಸ್! (Hassan | Theft | SP | Sharathchandra | Police)
Bookmark and Share Feedback Print
 
ಅಂತರ್ಜಿಲ್ಲಾ ಕಳ್ಳತನದಲ್ಲಿ ನಿಪುಣನಾದ ತಂಡದ ನಾಯಕ ಪೊಲೀಸರ ಮಾಹಿತಿದಾರಿಣಿಯ ಹೃದಯಕ್ಕೂ ಲಗ್ಗೆ ಹಾಕಿದ ಸ್ವಾರಸ್ಯಕರ ಘಟನೆಯೊಂದು ಬಹಿರಂಗಗೊಂಡಿದ್ದು, ಈ ರೀತಿ ಆತ ಸುಮಾರು ಆರು ಯುವತಿಯರಿಗೆ ಪ್ರೇಮಪಾಶ ಹಾಕಿದ್ದಾನೆ !

ಎಸ್ಪಿ ಶರತ್ಚಂದ್ರ ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ಬಹಿರಂಗಪಡಿಸಿದರು. ರಾಜ್ಯದ ನಾನಾ ಕಡೆ 26 ಕಳವು ಪ್ರಕರಣದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿರುವ ತಂಡದ ಪ್ರಮುಖ ಶಿವಮೊಗ್ಗ ಜನ್ನತ್‌ಗಲ್ಲಿಯ ಶಂಕರ. ಈತ ಕಳ್ಳತನದಲ್ಲಿ ಅಷ್ಟೇ ಅಲ್ಲ, ಸುಂದರ ಯುವತಿಯರಿಗೆ ಪ್ರೇಮಪಾಶ ಹಾಕುವಲ್ಲೂ ನಿಪುಣ.

ಪೊಲೀಸರ ಗುಪ್ತಚರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾರ್ವತಿ ಕೂಡ ಕಳ್ಳನ ಆರು ಹೆಂಡತಿಯರ ಪೈಕಿ ಒಬ್ಬಳಾಗಿದ್ದು ವಿಪರ್ಯಾಸ. ಕಳ್ಳನ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರತಳಗಾದ್ದ ಪಾರ್ವತಿ ಶಂಕರನ ಮೋಹದ ಬಲೆಗೆ ಬಿದ್ದು ಆತನನ್ನು ಮದುವೆಯಾಗಿದ್ದಾಳೆ. ಅಲ್ಲದೆ, ಆತನ ಜತೆ ಕಳ್ಳತನದಲ್ಲಿ ಭಾಗಿಯಾಗುವ ಮೂಲಕ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಇದೀಗ ಹಾಸನದ ಜೈಲು ಪಾಲಾಗಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ