ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಲ್ಲಾ ಹಾಸ್ಟೆಲ್‌ಗಳಲ್ಲಿ ಮಾಂಸಾಹಾರ: ಮುಮ್ತಾಜ್ ಅಲಿಖಾನ್ (Hostel | Mumtaj ali khan | Chikka ballapur | BJP)
Bookmark and Share Feedback Print
 
ರಾಜ್ಯದ ಎಲ್ಲ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಮಾಂಸಾಹಾರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಮ್ತಾಜ್ ಅಲಿಖಾನ್ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ನಂದಿ ಉತ್ಸವ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಎಲ್ಲ ಅಲ್ಪಸಂಖ್ಯಾತರ ವಸತಿ ನಿಲಯ, ಮೊರಾರ್ಜಿ ವಸತಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಮಾಂಸಾಹಾರ ನೀಡಲು ಈಗಾಗಲೇ ಸೂಚಿಸಲಾಗಿದೆ. ಸರಕಾರ ನಡೆಸುವ ಎಲ್ಲ ವಸತಿ ನಿಲಯಗಳಲ್ಲೂ ಇದು ಜಾರಿಯಾಗಬೇಕೆಂದು ತಿಳಿಸಿದರು.

ವಸತಿ ಶಾಲೆಗಳಲ್ಲಿರುವ ಅಲ್ಪಸಂಖ್ಯಾತ ಮಕ್ಕಳಿಗೆ ಜತೆಗೆ ಪರಿಶಿಷ್ಟ ಜಾತಿ, ಪಂಗಡ ಹಿಂದುಳಿದ ವರ್ಗದ ಹಾಸ್ಟೆಲ್‌ಗಳಲ್ಲಿ ಇರುವ ಮಕ್ಕಳಿಗೆ ದಿನವೂ ತರಕಾರಿ ತಿನ್ನಿ ಎನ್ನಲಾಗದು. ಇದೇ ವೇಳೆ ಸಸ್ಯಾಹಾರಿಗಳಿಗೆ ವಿಶೇಷ ಸಿಹಿತಿಂಡಿ ನೀಡಬಹುದು. ಶಾಖಾಹಾರಿಗಳ ಸಂಪ್ರದಾಯಕ್ಕೆ ಅಡ್ಡಿಯಾಗದ ರೀತಿಯಲ್ಲಿ ಮಾಂಸಾಹಾರ ವಿತರಣೆ ಮಾಡಬೇಕು. ಬಹುತೇಕ ಹಾಸ್ಟೆಲ್‌ಗಳಲ್ಲಿ ಮಾಂಸಾಹಾರ ಬೇಯಿಸಲು ನುರಿತ ಮಾಂಸಹಾರಿ ಅಡುಗೆಯವರನ್ನು ನೇಮಿಸಬೇಕು ಎಂದು ಸಚಿವ ಖಾನ್ ಹೇಳಿದರು.

ಸಸ್ಯಾಹಾರಿ ಅಡುಗೆಯವರಾದ ಲಿಂಗಾಯತರು, ಬ್ರಾಹ್ಮಣ ಅಡುಗೆಯವರನ್ನು ಮಾಂಸಾಹಾರ ಬೇಯಿಸಲು ಹೇಳುವುದನ್ನು ತಾವು ವಿರೋಸುವುದಾಗಿ ಸ್ಪಷ್ಟಪಡಿಸಿದ ಅವರು, ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ಮುಸ್ಲಿಂ ಅಡುಗೆಯವರನ್ನು ನೇಮಿಸಲು ತಾವು ಆದೇಶಿಸಿರುವುದನ್ನು ಅಲ್ಲಗಳೆದರು.
ಸಂಬಂಧಿತ ಮಾಹಿತಿ ಹುಡುಕಿ