ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ಅಕ್ರಮ ಮುಚ್ಚಿಕೊಳ್ಳಲು ಪಾದಯಾತ್ರೆ: ಎಚ್.ಡಿ.ರೇವಣ್ಣ (Revanna | Congress | BJP | JDS | Yeddyurappa | Supreme court)
Bookmark and Share Feedback Print
 
ಗಣಿ ಅಕ್ರಮ ಮುಚ್ಚಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿಗಳು ಪಾದಯಾತ್ರೆ ಮತ್ತು ಸಮಾವೇಶ ನಡೆಸಿ ಜನತೆಯ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

ಈ ಎರಡೂ ಪಕ್ಷಗಳಿಗೆ ಜನಪರ ಕಾರ್ಯಕ್ರಮಗಳು ಬೇಡವೇ ಬೇಡ, ಹೀಗಿರುವಾಗ ಜನತೆ ಈ ಪಕ್ಷಗಳಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ತಮ್ಮ ಲೋಪ ಮುಚ್ಚಿಕೊಳ್ಳಲು ಗಣಿ ಅಕ್ರಮ ಹಣದಲ್ಲಿ ಬಿಜೆಪಿ ಅಭಿಯಾನ ನಡೆಸುತ್ತಿದೆ ಎಂದು ಟೀಕಿಸಿದರು. ಗಣಿ ಇಲಾಖೆ ಮುಖ್ಯಮಂತ್ರಿ ಅಧೀನದಲ್ಲಿಯೇ ಬರುತ್ತದೆ. ಆದರೂ ಅಕ್ರಮ ಗಣಿಗಾರಿಕೆ ತಡೆಯಲು ಹಿಂದೇಟು ಹಾಕುತ್ತಿರುವುದು ರೆಡ್ಡಿದ್ವಯರ ತಲೆ ಕಾಯುವುದಕ್ಕಾಗಿ ಎಂದು ಆರೋಪಿಸಿದರು.

ಆದಾಯ, ರಫ್ತು ಹಾಗೂ ಬಂದರುಗಳು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವಾಗ ಅಕ್ರಮವಾಗಿ ಸಾಗಿಸುತ್ತಿರುವ ಅದಿರನ್ನು ತಡೆದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕಾಂಗ್ರೆಸ್ ಪಕ್ಷ ತಡೆಯಬಹುದಿತ್ತು. ಅದನ್ನು ಬಿಟ್ಟು 16 ದಿನಗಳ ಪಾದಯಾತ್ರೆ ಮಾಡುವ ಮೂಲಕ ಅವರು ಮಜಾ ಮಾಡಿದ್ದಾರೆ ಎಂದು ರೇವಣ್ಣ ಲೇವಡಿ ಮಾಡಿದರು.

ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ನೀಡುವ 371 ಕಲಂ ಜಾರಿಗೆ ತರಲು ಎರಡು ಪಕ್ಷದಲ್ಲಿ ಇಚ್ಚಾಸಕ್ತಿ ಇದ್ದರೆ ದೆಹಲಿಗೆ ಪಾದಯಾತ್ರೆ ಬೆಳಸಲಿ ಎಂದು ಆಗ್ರಹಸಿದ ಅವರು ಉತ್ತರ ಕರ್ನಾಟಕದ ಸಂತ್ರಸ್ತರನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೆಸರು ಕೆಡಿಸಲು 150 ಕೋಟಿ ರೂ ಲಂಚ ಪ್ರಕರಣವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಕುತಂತ್ರ ನಡೆಸಿತ್ತು. ಇಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ನೋಡಿದಾಗ ದೇವರು ನಮ್ಮ ಪರವಾಗಿ ಇದ್ದಾನೆ ಎಂಬುದಕ್ಕೆ ಸಾಕ್ಷಿ ಎಂದು ಎಚ್.ಡಿ.ರೇವಣ್ಣ ಪ್ರತಿಕ್ರಿಯಿಸಿದರು.

ಸಚಿವ ಜನಾರ್ದನ ರೆಡ್ಡಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸುಪ್ರಿಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಅರ್ಜಿಯನ್ನು ಪರಶೀಲಿಸಿದ ಸರ್ವೋಚ್ಚ ನ್ಯಾಯಲಯ ಈ ವ್ಯಾಜ್ಯವನ್ನು ಹೈಕೋರ್ಟಿನಲ್ಲಿ ಇತ್ಯರ್ಥಗೊಳಿಸಿ ಕೊಳ್ಳಲು ಸಲಹೆ ಮಾಡಿ ಅರ್ಜಿಯನ್ನು ವಜಾಗೊಳಿಸಿದ್ದು, ಕುಮಾರಣ್ಣನಿಗೆ ದೊರೆತ ಜಯ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ