ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಣವಿಲ್ಲದೆ ಕಾಮಗಾರಿಗಳು ಸ್ಥಗಿತಗೊಂಡಿವೆ: ಸಿದ್ದರಾಮಯ್ಯ (Siddaramaiah | Congress | Yeddyurappa | Mysore | JDS)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸರಕಾರದಲ್ಲಿ ಹಣವಿಲ್ಲದೇ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂದು ವಿಧಾನಸಭೆ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಆರೋಪಿಸಿದ್ದಾರೆ.

ವರುಣಾ ಕ್ಷೇತ್ರದ ಹದಿನಾರು ಮೋಳೆ ಗ್ರಾಮಗಳಲ್ಲಿ ಅಂಗನವಾಡಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ, ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಯಡಿಯೂರಪ್ಪ ಸರಕಾರದಲ್ಲಿ ಹಣವಿಲ್ಲದೆ ಮಹತ್ವದ ಕಾರ್ಯಕ್ರಮಗಳು ಸ್ಥಗಿತಗೊಳ್ಳುತ್ತಿವೆ. ಇದರಲ್ಲಿ ಸುವರ್ಣ ಗ್ರಾಮ ಪ್ರಮುಖ ಯೋಜನೆ. ಆದರೆ ಇದರ ಕಾಮಗಾರಿಗಳು ಹಣ ಬಿಡುಗಡೆಯಾಗದೇ ಕುಂಠಿತಗೊಂಡಿವೆ. ಇದರ ನಡುವೆ ಗುತ್ತಿಗೆದಾರರು ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆಂದು ಆರೋಪಿಸಿದರು.

ಅಧಿಕಾರಿಗಳು ನೀರಾವರಿ ಇರುವ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು. ಈ ಸರಕಾರದಲ್ಲಿ ಆಡಳಿತ ಯಂತ್ರವೇ ಹದಗೆಟ್ಟಿದ್ದು, ಎಲ್ಲವೂ ಲಂಚಮಯವಾಗಿದೆ ಎಂದು ಟೀಕಿಸಿದರು.

ಒಂದು ಕೋಟಿ 40 ಲಕ್ಷ ರೂ.ಗಳಲ್ಲಿ ಹದಿನಾರು ಮತ್ತು ಮೋಳೆ ಗ್ರಾಮದಲ್ಲಿ ಕಾಮಗಾರಿ ಮುಗಿದಿದ್ದು, ಇನ್ನೂ 3 ರಿಂದ 4 ಕೋಟಿ ಬೇಕಾಗುತ್ತದೆ. ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿಸಿ ಕಾಮಗಾರಿ ಮುಗಿಸುವ ಭರವಸೆ ನೀಡಿದರು.

ಶಾಲಾ ಕಟ್ಟಡ ದುರಸ್ತಿಗೆ ಹಣ ಕೊಡುವುದಾಗಿ ತಿಳಿಸಿದರು. ಪಿಡಬ್ಲ್ಯುಡಿ ಮುಖ್ಯ ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದ್ದು, ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಬಸವನ ಪುರದಿಂದ ಹದಿನಾರುವರೆಗೆ, ತಗಡೂರು ರಸ್ತೆ, ನರಸೀಪುರದಿಂದ ನಂಜನಗೂಡು ರಸ್ತೆಯನ್ನು ಸಿಆರ್ಎಫ್ ಫಂಡ್‌ಗೆ ಬರೆದಿದ್ದು, ಬಂದ ನಂತರ ಕಾಮಗಾರಿ ಮಾಡುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ