ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜನರ ಅಹವಾಲು-'ನಿಮ್ಮೊಂದಿಗೆ ನಾವು': ಜನಾರ್ದನ ರೆಡ್ಡಿ (Janardana Reddy | BJP | Yeddyurappa | Ballary | Congress)
Bookmark and Share Feedback Print
 
'ನಿಮ್ಮೊಂದಿಗೆ ನಾವು' ಎಂಬ ವಿನೂತನ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳು 5 ದಿನ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಸಂಚರಿಸಿ ಜನತೆಯ ಅಹವಾಲು ಆಲಿಸಲು ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಸೆ.16ರಿಂದ 20ರವರೆಗೆ ಜಿಲ್ಲಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಜನಾರ್ದನರೆಡ್ಡಿ ತಿಳಿಸಿದರು.

ಇಲ್ಲಿಯ ಗೃಹ ಕಚೇರಿ ಕುಟೀರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ಬಳಿ ತೆರಳಿ ಅಹವಾಲು ಆಲಿಸಿ ಪರಿಹಾರ ರೂಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನಸ್ಪಂದನ ಕಾರ್ಯಕ್ರಮಕ್ಕಿಂತ ವಿಭಿನ್ನ ಪ್ರಯತ್ನ ಇದಾಗಿದ್ದು, ಜನತೆಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ರೂಪಿಸಲು ಪ್ರಯತ್ನಿಸಲಾಗುವುದು ಎಂದರು.

ಸೆ.16ರಂದು ಬೆಳಗ್ಗೆ 9ರಿಂದ 1ರವರೆಗೆ ಹಡಗಲಿಯ ಅತಿಥಿಗೃಹ, ಮಧ್ಯಾಹ್ನ 2ರಿಂದ 6ರವರೆಗೆ ಹಗರಿಬೊಮ್ಮನಹಳ್ಳಿಯ ಶಿವರಾಜ್ ಶೇಖ್ ಫಾರ್ಮ್ ಹೌಸ್, 17ರಂದು ಹೊಸಪೇಟೆಯ ಅಮರಾವತಿ ಅತಿಥಿಗೃಹ, ಸಿರಗುಪ್ಪ ಅತಿಥಿಗೃಹ, 18ರಂದು ಕೂಡ್ಲಿಗಿ ಅತಿಥಿಗೃಹ, ಸಂಡೂರು ಅತಿಥಿಗೃಹ, 19ರಂದು ಬಳ್ಳಾರಿ ಗ್ರಾಮೀಣ, ಕಂಪ್ಲಿ ಮತ್ತು 20ರಂದು ಬಳ್ಳಾರಿ ನಗರ ಕ್ಷೇತ್ರ ಅಹವಾಲು ಮತ್ತು ಪರಿಹಾರ ಗೃಹಕಚೇರಿ ಕುಟೀರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ನಮ್ಮೊಂದಿಗೆ ಯಾರು?: ನಿಮ್ಮೊಂದಿಗೆ ನಾವು' ತಂಡದಲ್ಲಿ ಆಯಾ ಕ್ಷೇತ್ರದ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದು, ಜನತೆಯ ಅಹವಾಲು ಆಲಿಸಿ ಸಾಧ್ಯವಾದರೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಿದ್ದಾರೆ. ನಿಗದಿತ ದಿನಗಳಂದು ನಿಗದಿತ ಸ್ಥಳಕ್ಕೆ ಆಗಮಿಸಿ ಜನತೆ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಜನಾರ್ದನರೆಡ್ಡಿ ತಿಳಿಸಿದರು.

ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆ, ಅಹವಾಲು ಆಧರಿಸಿ ಪರಿಹಾರ ರೂಪಿಸುವ ಕೆಲಸ ತ್ವರಿತವಾಗಿ ನಡೆಯುತ್ತದೆ. ಸ್ಥಳದಲ್ಲಿ ಬಗೆಹರಿಸಲಾಗದ ಸಮಸ್ಯೆಗಳಿದ್ದರೆ ಮುಖ್ಯಮಂತ್ರಿ, ಹಿರಿಯ ಸಚಿವ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಿ ಪರಿಹಾರ ಒದಗಿಸಲಾಗುವುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ