ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿದ್ದರಾಮಯ್ಯಗೆ ಕಾಂಗ್ರೆಸ್ಸೇ ಗತಿ: ಬಚ್ಚೇಗೌಡ ವ್ಯಂಗ್ಯ (Siddaramaiah | Bahhegowda | BJP | Yeddyurappa | JDS)
Bookmark and Share Feedback Print
 
ಸಿದ್ದರಾಮಯ್ಯಗೆ ಬಿಜೆಪಿ ಒಗ್ಗಲ್ಲ, ಜೆಡಿಎಸ್‌ಗೆ ಹೋಗಲ್ಲ, ಆದ್ದರಿಂದ ಅವರಿಗೆ ಕಾಂಗ್ರೆಸ್ಸೇ ಗತಿ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಇನ್ನು ಯಾವ ಪಕ್ಷವೂ ಉಳಿದಿಲ್ಲ. ಕಾಂಗ್ರೆಸ್ ಹೊಲಸು ರಾಜಕಾರಣದಲ್ಲಿ ಅವರು ನೊಂದಿದ್ದರೂ, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಆ ಪಕ್ಷದಲ್ಲೇ ಪ್ರಬಲ ಗುಂಪು ಕಟ್ಟಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ, ಈಗ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ಡಾ.ಅಜಯ ಸಿಂಗ್ ಸೋತಿಲ್ಲವೇ? ಚುನಾವಣೆ ಫಲಿತಾಂಶಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಣ ಅಲ್ಲ. ಆ ಪಕ್ಷದ ಎಲ್ಲರೂ ಸಾಮೂಹಿಕವಾಗಿ ಜವಾಬ್ದಾರಿ ಹೊರಬೇಕು ಎಂದರು.

ಗುಲ್ಬರ್ಗ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆಯಲಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ಮಾಡಬೇಕಾಯಿತು. ಜೆಡಿಎಸ್‌ಗೆ ಅನುಕಂಪದ ಅಲೆ ಅನುಕೂಲವಾಯಿತು ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಕಡೂರು ಕ್ಷೇತ್ರದ ಗೆಲುವಿನ ಬಗ್ಗೆ ಅನುಮಾನ ಇರಲಿಲ್ಲ. ಗೆಲುವಿನ ಅಂತರ 10 ಸಾವಿರದೊಳಗೆ ಇರಬಹುದು ಎಂದು ನಿರೀಕ್ಷಿಸಿದ್ದೆವು. ನಮ್ಮ ನಿರೀಕ್ಷೆ ಮೀರಿ ಮತ ಬಂದಿದೆ. ಇದು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕೆಲಸಕ್ಕೆ ಸಿಕ್ಕ ಮನ್ನಣೆ ಎಂದು ಬಣ್ಣಿಸಿದರು.
ಚೀನಾಗೆ ಸಿಎಂ ಭೇಟಿ ನೀಡಿರುವುದು ಬಂಡವಾಳ ತರುವುದಕ್ಕೇ ಹೊರತು, ಅಲ್ಲೇ ಬಂಡವಾಳ ಹೂಡಲು ಅಲ್ಲ. ಸುಮ್ಮನೆ ತಪ್ಪು ಕಲ್ಪನೆ ಮೂಡಿಸುವ ಆರೋಪ ಮಾಡುವುದು ಸರಿಯಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ