ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೆಪಿಸಿಸಿ ಅಧ್ಯಕ್ಷಗಾದಿ-ಮಹಿಳೆಯರಿಗೂ ಅವಕಾಶ ಕೊಡಿ: ಮೋಟಮ್ಮ (KPCC | Motamma | Hassan | Congress | Rani sathish,)
Bookmark and Share Feedback Print
 
ಕೆಪಿಸಿಸಿ ಅಧ್ಯಕ್ಷಗಾದಿಯನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗೂ ಇದೆ. ಹಾಗಾಗಿ ಮಹಿಳೆಯರಿಗೂ ಒಂದು ಅವಕಾಶ ಕೊಟ್ಟು ನೋಡಲಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ತಿಳಿಸಿದ್ದಾರೆ.

ರಾಣಿ ಸತೀಶ್ ಸೇರಿದಂತೆ ತಾವೂ ಕೂಡ ಕೆಪಿಸಿಸಿ ಸ್ಥಾನ ನಿಭಾಯಿಸಲು ಸಮರ್ಥರಾಗಿದ್ದೇವೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ. ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಮಹಿಳೆಯರಿಗೂ ಅವಕಾಶ ಕೊಡಿ ಎಂಬುದು ತಮ್ಮ ಇಚ್ಛೆಯೇ ಹೊರತು ಒತ್ತಾಯ ಅಲ್ಲ ಎಂದು ಹೇಳಿದರು. ಆ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಒಮ್ಮೆ ಮಹಿಳೆಯರಿಗೂ ಈ ಸ್ಥಾನ ಕೊಟ್ಟು ನೋಡಲಿ ಎಂದು ಹೇಳಿದರು.

ಕಡೂರು ವಿಧಾನಸಭಾ ಕ್ಷೇತ್ರದಲ್ಲಿರುವ ಕುರುಬ ಜನಾಂಗದವರು ಮತ ನೀಡದೆ ಮೋಸ ಮಾಡಿದರು. ಹೀಗಾಗಿಯೇ ಕಾಂಗ್ರೆಸ್ ಹೀನಾಯವಾಗಿ ಪರಾಜಯಗೊಳ್ಳಬೇಕಾಯಿತು. ತಮ್ಮ ಜನಾಂಗದವರೇ ತಮಗೆ ಕೈಕೊಟ್ಟಿರುವುದು ಸಿದ್ದರಾಮಯ್ಯನವರಿಗೆ ತೀವ್ರ ಬೇಸರ ತರಿಸಿದೆ ಎಂದು ಮೋಟಮ್ಮ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ