ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಂಡಾಯ ಸಾಹಿತ್ಯ ಅನಿವಾರ್ಯ: ಚಂಪಾ ನುಡಿ (Chandra shekar patil | Bandaya sahithya | Chithra durga | Kannada)
Bookmark and Share Feedback Print
 
ಪ್ರತಿಭಟನೆಗೆ ಪ್ರಚೋದಕವಾದ ವ್ಯವಸ್ಥೆ ಇರುವವರೆಗೂ ಬಂಡಾಯ ಸಾಹಿತ್ಯ ಅನಿವಾರ್ಯ ಎಂದು ಸಾಹಿತಿ ಚಂದ್ರಶೇಖರ ಪಾಟೀಲ್ ಅಭಿಪ್ರಾಯಪಟ್ಟರು.

ಚಿತ್ರದುರ್ಗದಲ್ಲಿ ನಡೆದ 'ಬಂಡಾಯ ಸಾಹಿತ್ಯ: ಮೂವತ್ತು ವರ್ಷ' ರಾಜ್ಯ ಮಟ್ಟದ ಜನಸಂಸ್ಕೃತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಂಡಾಯ ಸಂಘಟನೆ ಈಗ ಕ್ಷೀಣಿಸಿರಬಹುದು. ಇದು ಸಹಜ ಕೂಡ. ಯಾವುದೇ ಚಳವಳಿ ಹೆಚ್ಚೆಂದರೆ 10 ರಿಂದ 15 ವರ್ಷ ಪ್ರಖರವಾಗಿರುತ್ತದೆ. ನಂತರ ತನ್ನೊಳಗಿನ ವೈರುಧ್ಯಗಳ ತಾಕಲಾಟದಿಂದ ಮತ್ತೊಂದು ಚಳವಳಿಗೆ ಅದು ದಾರಿಮಾಡಿಕೊಡುತ್ತದೆ. ಹಾಗಾಗಿ ಬಂಡಾಯ ಸಂಘಟನೆಯಲ್ಲಿ ಕೊರತೆಯಾಗಿರಬಹುದು ಆದರೆ ಸಾಹಿತ್ಯ ಚಳವಳಿ ನಿರಂತರವಾಗಿ ಸಾಗಿದೆ ಎಂದರು.

ನವ್ಯ ಪ್ರಕಾರಕ್ಕೆ ಸಮಷ್ಟಿಯ ದೃಷ್ಟಿಯಿಲ್ಲದ ಕಾರಣ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡಿತು. ಆದರೆ ಆಗಲೂ ಬಂಡಾಯವನ್ನು ಹೀಗಳೆದವರಿದ್ದರು. ಅವರದೇ ಮುಂದುವರಿದ ಸಂತಾನ ಈಗಲೂ ಆ ಕೆಲಸವನ್ನು ಮಾಡುತ್ತಿದೆ. ಅದರ ಹಿಂದಿನ ಹುನ್ನಾರವನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಜನ ಬದುಕಬೇಕೆಂದು ಸಾಹಿತ್ಯ ಬರೆಯುತ್ತೇವೆ ಎಂದು ಹಿರಿಯ ಸಾಹಿತಿಯೊಬ್ಬರು ಹೇಳಿದ್ದಾರೆ. ಸಾಹಿತಿಗಳು ಅಕ್ಷರಸ್ಥರು ಮಾತ್ರವಲ್ಲ, ಸಂವೇದನಾಶೀಲರು, ಸಮಷ್ಟಿ ಪ್ರಜ್ಞೆ ಉಳ್ಳವರು, ಜನ ಗೌರವಯುತ ಹಾಗೂ ಸಮಾನತೆಯಿಂದ ಬದುಕುವ ವಾತಾವರಣ ಸೃಷ್ಟಿಸುವುದು ಅವರ ಗುರಿಯಾಗಿರಬೇಕು ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ