ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಲಾಪದಲ್ಲಿ ಪ್ರತಿಪಕ್ಷಗಳು ಚರ್ಚೆ ನಡೆಸಬೇಕು: ಶಂಕರಮೂರ್ತಿ (Shankar murthy | BJP | Congress | JDS | Vidhana parishath)
Bookmark and Share Feedback Print
 
ವಿಧಾನ ಪರಿಷತ್‌ನಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಚರ್ಚೆ ನಡೆಸುವಲ್ಲಿ ಪ್ರತಿಪಕ್ಷಗಳು ಸಂಪೂರ್ಣ ವಿಫಲವಾಗಿವೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.

ವಾಸವಿ ಸಂಕಲ್ಪ ರಥಯಾತ್ರೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಸಂಪತ್ತು ಅಕ್ರಮವಾಗಿ ವಿದೇಶಗಳಿಗೆ ಸಾಗುವುದನ್ನು ತಡೆಯಲು ಪ್ರತಿಪಕ್ಷಗಳು ಕನಿಷ್ಠ ಚರ್ಚೆ ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಸರಕಾರ ನಡೆಸುವ ಕಲಾಪಗಳು ನೂರು ದಿನಗಳಲ್ಲಿ ಕನಿಷ್ಠ 70 ದಿನಗಳಾದರೂ ಸೂಕ್ತ ಚರ್ಚೆಗಳಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿ. ಪರಿಷತ್ ಕಲಾಪಗಳಿಗೆ ಹೆಚ್ಚಿನ ಕಾನೂನು ಅಗತ್ಯವಿಲ್ಲ. ಆದರೂ ರಾಜ್ಯದಲ್ಲಿ ವಿಧಾನ ಪರಿಷತ್‌ನ ಅವಶ್ಯಕತೆ ಇದೆ ಎಂದರು.

ಸದನಗಳಲ್ಲಿ ಗಂಭೀರ ಚರ್ಚೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗ ಮಾತ್ರ ಜನರಿಗೆ ಸರಕಾರ ಮತ್ತು ಪ್ರಜಾಪ್ರಭುತ್ವದ ಮೇಲೆ ಗೌರವ ಬೆಳೆಯಲು ಸಾಧ್ಯ. ಕೆಲ ರಾಜ್ಯಗಳಲ್ಲಿ ವಿಧಾನ ಪರಿಷತ್ ವ್ಯವಸ್ಥೆ ಸ್ಥಾಪಿಸಲು ಚರ್ಚೆಗಳು ನಡೆಯುತ್ತಿದ್ದು, ಸ್ವಾಗತಾರ್ಹವಾಗಿದೆ. ಇದರಿಂದ ಪರಿಷತ್ತಿನ ಮಹತ್ವ ಹೆಚ್ಚುತ್ತದೆ ಎಂದರು.

ಜಾಗತಿಕ ತಾಪಮಾನ ಕುರಿತು ವಿಶ್ವಬ್ಯಾಂಕ್ ಎರಡು ಬಿಲಿಯನ್ ಹಣ ನೀಡುವ ಸಾಧ್ಯತೆ ಇದ್ದು, ಸರಕಾರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಭಾರತೀಯ ಕಲಾವಿದರಿಗೆ, ಗಣ್ಯರಿಗೆ ಸೌಲಭ್ಯ ನೀಡಿಲ್ಲ ಎಂಬುವುದು ತಪ್ಪು. ವಿದೇಶಕ್ಕೆ ಹೋದಾಗ ಕೆಲ ತೊಂದರೆಗಳು ಸಾಮಾನ್ಯ. ಅಕ್ಕ ಸಮ್ಮೇಳನವನ್ನು ಕರ್ನಾಟಕ ಸರಕಾರವಾಗಲಿ, ಸಾಹಿತಿಗಳಾಗಲಿ, ಕಲಾವಿದರಾಗಲಿ ಏರ್ಪಡಿಸಿದ್ದಲ್ಲ. ಅಮೆರಿಕದಲ್ಲಿ ಬಹಳ ವರ್ಷಗಳಿಂದ ನೆಲೆಸಿರುವ ಕನ್ನಡಿಗರು ಇಲ್ಲಿನ ಭಾಷೆ, ಸಂಸ್ಕೃತಿ ಮೆರೆಯುವಂತೆ ನಡೆಸಿದ ಸಮ್ಮೇಳನ ಎಂದರು.
ಸಂಬಂಧಿತ ಮಾಹಿತಿ ಹುಡುಕಿ