ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೈಕೊಟ್ಟ ಸಿಎಂ: ಬೆಲ್ಲದ, ಭಟ್, ಶಂಕರಲಿಂಗೇಗೌಡಗೆ ನಿರಾಸೆ (BJP | Yeddyurappa | Bangalore | Congress | Ishwarappa)
Bookmark and Share Feedback Print
 
ಸಚಿವ ಸಂಪುಟ ಪುನಾರಚನೆ ಕಸರತ್ತಿನಲ್ಲಿ ಎಲ್ಲಾ ವಿರೋಧಗಳ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದು, ಆರು ಮಂದಿ ಶಾಸಕರು ನೂತನ ಸಚಿವರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ನಾಲ್ಕೈದು ಬಾರಿ ಆಯ್ಕೆಯಾದ ಹಿರಿಯ ಶಾಸಕರು ಈ ಬಾರಿಯೂ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಚಂದ್ರಕಾಂತ ಬೆಲ್ಲದ, ಮಂಗಳೂರು ದಕ್ಷಿಣ ಕ್ಷೇತ್ರದ ಎನ್.ಯೋಗೀಶ್ ಭಟ್, ಸುಳ್ಯ ಕ್ಷೇತ್ರದ ಎಸ್.ಅಂಗಾರ, ಮೈಸೂರು ಚಾಮರಾಜ ಕ್ಷೇತ್ರದ ಎಚ್.ಎಸ್.ಶಂಕರಲಿಂಗೇಗೌಡ, ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಶಾಸಕರಾಗುವ ಕನಸು ಕೊನೆಗೂ ನೆರವೇರಿಲ್ಲ.

ಚಂದ್ರಕಾಂತ ಬೆಲ್ಲದ ಹಿರಿಯ ಶಾಸಕರಾಗಿದ್ದಾರೆ. ಒಂದು ಬಾರಿ ಜನತಾದಳದಿಂದ, ಪಕ್ಷೇತರರಾಗಿ ಒಮ್ಮೆ ಹಾಗೂ ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿದ್ದರು.ಪಕ್ಷದಲ್ಲಿ ಹಿರಿಯ ಶಾಸಕರಾಗಿದ್ದರೂ ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸಲು ಸಾಧ್ಯವಾಗದೆ ದೂರ ಉಳಿದಿದ್ದಾರೆ. ಅದೇ ರೀತಿ ಶಂಕರಲಿಂಗೇಗೌಡರು ಸಚಿವಗಿರಿಗಾಗಿ ಕೊನೆವರೆಗೂ ಕಸರತ್ತು ನಡೆಸಿ ವಿಫಲರಾಗಿದ್ದಾರೆ. ಆದರೆ ಯೋಗೀಶ್ ಭಟ್, ಅಂಗಾರ ಮತ್ತು ಶ್ರೀನಿವಾಸ್ ಶೆಟ್ಟಿ ಲಾಬಿ ನಡೆಸಲು ಸಾಧ್ಯವಾಗದೆ ಸ್ಪರ್ಧೆಯಿಂದ ದೂರ ಉಳಿಯುವ ಮೂಲಕ ಸಚಿವಪಟ್ಟದ ಕನಸು ಭಗ್ನವಾಗಿದೆ.

ಲಾಬಿ ನಡೆಸಿ ವಂಚಿತರಾದ ಅತೃಪ್ತರು: ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಶೃಂಗೇರಿ ಶಾಸಕ ಜೀವರಾಜ್, ಎಸ್.ಕೆ.ಬೆಳ್ಳುಬ್ಬಿ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸಚಿವಗಿರಿಗಾಗಿ ಸಾಕಷ್ಟು ಲಾಬಿ, ಒತ್ತಡ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿಯೇ ಅಸಮಾಧಾನಗೊಂಡ ಸಿ.ಟಿ.ರವಿ, ಜೀವಾರಾಜ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ಆಪರೇಶನ್ ಕಮಲದಲ್ಲಿ ಉಮೇಶ್ ಕತ್ತಿ ಬಿಜೆಪಿ ಸೇರ್ಪಡೆಗೊಂಡಾಗ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ತಲೆದಂಡ ತೆಗೆದುಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಬೆಳ್ಳುಬ್ಬಿಗೆ ನೂತನ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವಕಾಶ ನೀಡಲಾಗುವುದೆಂದು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಭರವಸೆ ಕೂಡ ಇದೀಗ ಸುಳ್ಳಾಗಿದೆ.

ರೆಡ್ಡಿ ಬ್ರದರ್ಸ್ ಕಿಡಿ,ಕಿಡಿ: ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದು ಹಾಗೂ ಶೋಭಾ ಕರಂದ್ಲಾಜೆಯನ್ನು ಮತ್ತೆ ಸಂಪುಟ ಸೇರಿಸಿಕೊಂಡಿರುವುದು ರೆಡ್ಡಿ ಸಹೋದರರು ಮತ್ತು ಅವರ ಪಟಾಲಂಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆ ನಿಟ್ಟಿನಲ್ಲಿ ರೆಡ್ಡಿ ಸಹೋದರರು ಸಚಿವ ಸಂಪುಟ ಪುನಾರಚನೆ ಬಗ್ಗೆ ಅಪಸ್ವರ ಎತ್ತುವ ಮೂಲಕ ಬಿಜೆಪಿಯಲ್ಲಿ ಮತ್ತೆ ಬಂಡಾಯದ ಕಹಳೆ ಮೊಳಗಿಸಿದೆ.

ಸಂಪುಟ ಪುನಾರಚನೆ-ಶೋಭಾ, ಸೋಮಣ್ಣ ಸೇರಿ 6 ಮಂದಿ ಪ್ರಮಾಣವಚನ ಸ್ವೀಕಾರ
ಸಂಬಂಧಿತ ಮಾಹಿತಿ ಹುಡುಕಿ