ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಾಸಕರು ತಮ್ಮ ವರ್ತನೆ ತಿದ್ದಿಕೊಳ್ಳಬೇಕು: ಶಂಕರಮೂರ್ತಿ (DH Shankaramurthy | Karnataka | Speaker | MLAs)
Bookmark and Share Feedback Print
 
ವಿಧಾನ ಮಂಡಲದಲ್ಲಿ ಅರ್ಥಪೂರ್ಣ ಚರ್ಚೆಯಲ್ಲಿ ಭಾಗವಹಿಸುವಿಕೆ, ನಡವಳಿಕೆ ಕುರಿತಂತೆ ಅಕ್ಟೌಬರ್ನಲ್ಲಿ ಆಯ್ದ ಶಾಸಕರಿಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದರು.

ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಮಂಡಲದಲ್ಲಿ ಜನತೆಯ ಸಮಸ್ಯೆಗಳು ಮತ್ತು ನಾಡಿನ ಅಗತ್ಯತೆಗಳ ಬಗ್ಗೆ ಗುಣಮಟ್ಟದ ಚರ್ಚೆ ನಡೆಯಬೇಕು. ಆದರೆ ಸದನದಲ್ಲಿ ಅಂತಹ ಚರ್ಚೆಗಳೇ ನಡೆಯುತ್ತಿಲ್ಲ. ಶಾಸಕ ವರ್ತನೆ ಬೇಸರ ತರಿಸುವಂತಿದೆ. ಸದನದ ವಿದ್ಯಮಾನಗಳನ್ನು ಜನತೆ ವೀಕ್ಷಿಸುವುದರಿಂದ ಸದಸ್ಯರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು. ಚರ್ಚೆಯ ಮಟ್ಟ ಉತ್ತಮಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಆಯ್ದ ಶಾಸಕರಿಗೆ ಅಕ್ಟೌಬರ್ನಲ್ಲಿ ಮೈಸೂರು ಇಲ್ಲವೆ ಬೆಂಗಳೂರಲ್ಲಿ ಮೂರು ದಿನಗಳ ತರಬೇತಿ ಶಿಬಿರ ನಡೆಸಲಾಗುವುದು ಎಂದರು.

ಶಿಬಿರದಲ್ಲಿ ಸದನದ ಘನೆತೆ, ಮಹತ್ವ, ನಡೆದುಕೊಳ್ಳಬೇಕಾದ ರೀತಿ, ಚರ್ಚೆಯಲ್ಲಿ ಪಾಲ್ಗೊಳ್ಳುವಿಕೆ, ಸಮಸ್ಯೆಗಳ ಚರ್ಚೆಗೆ ಮೊದಲು ಅಗತ್ಯವಾದ ದಾಖಲೆ ಮತ್ತು ಅಂಶಗಳನ್ನು ಕ್ರೌಢೀಕರಿಸುವುದು ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು. ಬೇಸರದ ಸಂಗತಿ ಎಂದರೆ ಈ ಹಿಂದೆ ಸಹ ಹಲವು ಬಾರಿ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಆದರೆ ಬಹಳಷ್ಟು ಸದಸ್ಯರು ಗೈರು ಹಾಜರಾಗುತ್ತಿದ್ದಾರೆ ಎಂದರು.

ವಿಧಾನಸೌಧದಲ್ಲಿ ಅತ್ಯುತ್ತಮ ಗ್ರಂಥಾಲಯ ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಚರ್ಚೆಗೆ ಮೊದಲು ಹೋಂ ವರ್ಕ್ ಮಾಡಿಕೊಂಡು ಬಂದರೆ ಚರ್ಚೆ ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಇವೆಲ್ಲದರ ಬಗ್ಗೆ ಸದಸ್ಯರು ಗಮನಿಸಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ