ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಯೋಧ್ಯೆ ತೀರ್ಪು ಸಂತಸ ನೀಡಿದೆ: ಶಾಸಕ ವಿಶ್ವನಾಥ್ (Ayodhya Judgement | Vishwanath | High court | Bangalore)
Bookmark and Share Feedback Print
 
ಅಲಹಾಬಾದ್ ಹೈಕೋರ್ಟ್‌ ಲಕ್ನೋ ಪೀಠ ರಾಮಲಲ್ಲಾ ವಿಗ್ರಹ ಇರುವಂತಹ ಜಾಗ ರಾಮ ಜನ್ಮ ಭೂಮಿ ಎನ್ನುವ ತೀರ್ಪು ನೀಡಿದ್ದು, ಇದು ಸಂತೋಷದ ವಿಚಾರ ಎಂದು ಶಾಸಕ ಎಸ್. ಆರ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲಾ ಹಿಂದು ಧರ್ಮದ ಜನರಿಗೆ ಭಾವನೆ ಇದ್ದುದ್ದು ರಾಮಲಲ್ಲಾ ವಿಗ್ರಹ ಇರುವ ಸ್ಥಳ ರಾಮ ಜನ್ಮ ಭೂಮಿ ಎಂಬುದಾಗಿತ್ತು . ನ್ಯಾಯ ಮೂರ್ತಿಗಳು ಅದೇ ಸ್ಥಳವನ್ನು ರಾಮ ಜನ್ಮ ಭೂಮಿ ಎನ್ನುವ ತೀರ್ಪು ಕೊಟ್ಟಿದ್ದಾರೆ. ಇದು ಕೂಡ ಸಂತೋಷಕರವಾದ ವಿಚಾರ ಅದೇ ರೀತಿಯಲ್ಲಿ ಮುಸುಲ್ಮಾನರಿಗೂ ಒಂದು ಭಾಗ ನೀಡಲಾಗಿದೆ. ಮತ್ತೊಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಲಾಗಿದೆ. ಹಾಗಾಗಿ ಈ ತೀರ್ಪು ಎಲ್ಲರು ಸ್ವಾಗತಿಸುವಂತಹದ್ದಾಗಿದೆ ಎಂದರು.

ತೀರ್ಪು ಹೊರಬಿದ್ದ ನಂತರ ಯಲಹಂಕ ಉಪನಗರ, ದೊಡ್ಡ ಬೆಟ್ಟಹಳ್ಳಿ ನಾಗವಾರ ಸೇರಿದಂತೆ ಕ್ಷೇತ್ರದ ನಾನಾ ಭಾಗಗಳಲ್ಲಿ ಹಿಂದು ಸಂಘಟನೆಗಳ ಬೆಂಬಲಿಗರು ಬಿಜೆಪಿ ಕಾರ್ಯಕರ್ತರು ಅಯೋದ್ಯೆ ತೀರ್ಪ ಸಂತೋಷಕ್ಕೆ ಸಿಹಿ ತಿಂಡಿ ಹಂಚಿ ಪಟಾಕಿ ಸಿಡಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ