ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಾಸಕರಿಂದ ರಾಜ್ಯದ ಮಾನ ಹರಾಜಾಗುತ್ತಿದೆ: ಪುಟ್ಟಣ್ಣಯ್ಯ (Puttannayya | Congress | BJP | JDS | Karnataka | Yeddyurappa)
Bookmark and Share Feedback Print
 
ಭಿನ್ನಮತದಲ್ಲಿ ರಾಜ್ಯದ ಎಲ್ಲಾ ಪಕ್ಷದವರು ವಿಶ್ವಮಾನವರಾಗಿದ್ದಾರೆ ಎಂದು ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ವ್ಯಂಗ್ಯವಾಡಿದ್ದಾರೆ.

ಎಲ್ಲಾ ಪಕ್ಷದ ಶಾಸಕರು ರೆಸಾರ್ಟ್ ಸೇರಿಕೊಂಡು ಜನರನ್ನೇ ಮರೆತಿದ್ದಾರೆ. ಆಡಳಿತ ಈಗ ರೆಸಾರ್ಟ್‌ಮಯವಾಗಿದೆ. ಕರ್ನಾಟಕದ ಜನರ ಮಾನ ಮರ್ಯಾದೆಯನ್ನು ಶಾಸಕರು ಹರಾಜು ಹಾಕುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈಗ ನಾಡಹಬ್ಬದ ಸಂಭ್ರಮ ರಾಜ್ಯದಲ್ಲಿರಬೇಕಿತ್ತು. ಆದರೆ ಪರಸ್ಪರ ಭಿನ್ನಾಭಿಪ್ರಾಯದಲ್ಲಿ ಸರಕಾರವಿದೆ. ಇದರಿಂದ ಆಡಳಿತಯಂತ್ರ ಸಂಪೂರ್ಣ ಕುಸಿದುಬಿದ್ದಿದೆ ಎಂದು ಆಪಾದಿಸಿದರು.

ಶಾಸಕರು ಬ್ಲ್ಯಾಕ್ ಮೇಲ್ ತಂತ್ರ ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಜನ ಮಾತ್ರ ಮೂಕ ಪ್ರೇಕ್ಷಕಂತೆ ಇದನ್ನೆಲ್ಲಾ ನೋಡುತ್ತಿದ್ದಾರೆ ಎಂದು ಅಸಮಾಧಾನವ್ಯಕ್ತಪಡಿಸಿದರು.

ಈಗ ಎಲ್ಲಾ ಪಕ್ಷದವರು ಕಳ್ಳರು. ಕೆಲವರು ಗಣಿ ಹೆಸರಿನಲ್ಲಿ ಭೂಮಿ ನುಂಗಿದರೆ, ಮತ್ತೆ ಕೆಲವರು ನೇರವಾಗಿ ಭೂ ಹಗರಣದಲ್ಲಿ ತೊಡಗಿದ್ದಾರೆ. ಇದರಿಂದಲೇ ಭಿನ್ನಾಭಿಪ್ರಾಯ ಶುರುವಾಗಿರುವುದು. ಎಲ್ಲಾ ಪಕ್ಷಗಳು ದೊಂಬರಾಟ ನಡೆಸುತ್ತಿದ್ದಾರೆ ಎಂದು ದೂರಿದರು. ಈಗ ಚಳವಳಿ, ಜನಾಂದೋಲನಗಳು ರಾಜ್ಯದಲ್ಲಿ ಇಲ್ಲದಾಗಿದೆ. ಇದಕ್ಕಾಗಿಯೇ ರೈತಸಂಘ ಮುಂದಿನ ತಿಂಗಳು ರಾಜಕೀಯ ಆಂದೋಲನವನ್ನು ಕೈಗೆತ್ತಿಕೊಳ್ಳಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ