ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅ.14ಕ್ಕೆ ಮತ್ತೆ ವಿಶ್ವಾಸಮತಕ್ಕೆ ರಾಜ್ಯಪಾಲ ಸೂಚನೆ
(Governor, Hansraj Bharadwaj, BJP Government, Karnataka Crisis, Vote Of Confidence)
ಮತ್ತೊಂದು ರಾಜಕೀಯ ಬೆಳವಣಿಗೆಯಲ್ಲಿ, ಸದನದಲ್ಲಿ ಅ.11ರ ವಿಶ್ವಾಸಮತ ಕಲಾಪ ಸರಿಯಾಗಿ ನಡೆದಿಲ್ಲ, ಅ.14ರಂದು ಮತ್ತೆ ಬಹುಮತ ಸಾಬೀತುಪಡಿಸಿ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಸದನದಲ್ಲಿ ಅನರ್ಹರಾದ ಸಚಿವರ ವಿಚಾರಣೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ ಈ ಹೊಸ ವಿದ್ಯಮಾನ ನಡೆದಿದ್ದು, ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆ ಸರಿಯಾಗಿಲ್ಲ. ಮತ್ತೊಂದು ಅವಕಾಶ ನೀಡಲು ಸಿದ್ಧ ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.
ಕೋರ್ಟ್ ತೀರ್ಪು 16 ಮಂದಿ ಸದಸ್ಯರ ಅನರ್ಹತೆ ಸಿಂಧು ಎಂದು ಬಂದರೆ, ಯಡಿಯೂರಪ್ಪ ಬಚಾವಾಗುತ್ತಾರೆ. ಅಸಿಂಧು ಎಂದಾದರೆ, ಯಡಿಯೂರಪ್ಪ ಸರಕಾರ ಪತನ.
ಅಕ್ಟೋಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಕಲಾಪ ನಡೆಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.
ಇದರೊಂದಿಗೆ ಪುನಃ ರಾಜಕೀಯ ರಂಗು ರಂಗೇರಲಿದ್ದು, ಕುದುರೆ ವ್ಯಾಪಾರ, ಕತ್ತೆ ವ್ಯಾಪಾರ, ಕಪ್ಪೆ ಜಿಗಿತ, ಅಸಭ್ಯ ನಡವಳಿಕೆ, ತುಚ್ಛ ರಾಜಕೀಯ, ಅದ್ಭುತ ತುಚ್ಛ ಪದಕೋಶಗಳ ಬಳಕೆ ಇತ್ಯಾದಿಗಳೆಲ್ಲವೂ ನಡೆಯುವ ನಿರೀಕ್ಷೆ ದಟ್ಟವಾಗಿದೆ.