ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಭಿನ್ನರಿಗೆ ತೀರ್ಪು ಬಾಕಿ; ಪಕ್ಷೇತರರ ವಿಚಾರಣೆ ಅ.18ಕ್ಕೆ (High court | Defection | Independent | BJP Government | Karnataka Crisis | Vote Of Confidence)
Bookmark and Share Feedback Print
 
ಬೆಂಗಳೂರು: ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಹೈಕೋರ್ಟ್ ತೀರ್ಮಾನ ಮಂಗಳವಾರ ಹೊರಬಂದಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ತಮ್ಮನ್ನು ಸ್ಪೀಕರ್ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಬಿಜೆಪಿಯ 11 ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ. ಆದರೆ ಪಕ್ಷೇತರ ಶಾಸಕರ ಅರ್ಜಿಯ ವಿಚಾರಣೆ ಆರಂಭವಾಗಿದ್ದು, ಅ.18ರವರೆಗೆ ವಿಚಾರಣೆಯನ್ನು ಮುಂದೂಡಲಾಗಿದೆ.

ಬಿಜೆಪಿ ಬಂಡಾಯ ಶಾಸಕರ ಅನರ್ಹತೆ ಕುರಿತ ವಾದ-ವಿವಾದಗಳು ಮುಗಿದಿದ್ದು, ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಆದರೆ ಅದು ಯಾವಾಗ ಬೇಕಾದರೂ ತೀರ್ಪು ನೀಡಬಹುದಾಗಿದ್ದು, ಅದು ಹೈಕೋರ್ಟಿಗೆ ಬಿಟ್ಟ ವಿಚಾರ.

ಅದೇ ರೀತಿ ಪಕ್ಷೇತರ ಶಾಸಕರ ಅರ್ಜಿಯ ವಿಚಾರಣೆಯೇ ಅ.18ರ ಮಧ್ಯಾಹ್ನ 2.30ಕ್ಕೆ ನಡೆಯಲಿರುವುದರಿಂದ ಅವರು ಅ.14ರ ವಿಶ್ವಾಸಮತ ಯಾಚನೆ ವೇಳೆ ಉಪಸ್ಥಿತರಿರುವುದು ಸಾಧ್ಯವಿಲ್ಲ ಎಂದಾಗುತ್ತದೆ. ಅವರ

ಮುಖ್ಯ ನ್ಯಾಯಮೂರ್ತಿ ಖೇಹರ್ ಮತ್ತು ನ್ಯಾಯಮೂರ್ತಿ ಕುಮಾರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಮಂಗಳವಾರ ಎರಡೂ ಅರ್ಜಿಗಳನ್ನು ವಿಚಾರಣೆಗೆ ಒಳಪಡಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ