ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯು-ಟರ್ನ್: ಬಿಜೆಪಿ ಮನೆಯಲ್ಲಿ ಕಾಣಿಸಿಕೊಂಡ ವರ್ತೂರು
(Karnataka Crisis | Trust Vote | Vartur Prakash | Independent MLA | Janardana Reddy)
2ನೇ ಬಾರಿ ವಿಶ್ವಾಸಮತಕ್ಕೆ ವೇದಿಕೆ ಸಜ್ಜಾಗುತ್ತಿರುವಂತೆಯೇ ಬುಧವಾರ ಕ್ಷಿಪ್ರವಾಗಿ ನಡೆದವುಗಳಲ್ಲಿ ಪ್ರಮುಖವಾದ ಒಂದು ಬೆಳವಣಿಗೆಯೆಂದರೆ, ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ಮರಳಿ ಬಿಜೆಪಿ ಪಾಳಯಕ್ಕೆ ಬಂದಿದ್ದಾರೆ.
ದಿಢೀರ್ ಆಗಿ ಪ್ರವಾಸೋದ್ಯಮ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರೊಂದಿಗೆ ಸಚಿವ ಕರುಣಾಕರ ರೆಡ್ಡಿ ನಿವಾಸದಲ್ಲಿ ಪ್ರತ್ಯಕ್ಷವಾದ ಕೋಲಾರ ವಿಧಾನಸಭಾ ಕ್ಷೇತ್ರದ ಸದಸ್ಯ ವರ್ತೂರು ಪ್ರಕಾಶ್, ತಾನು ಬಿಜೆಪಿ ಪರವಾಗಿ ಮತ ಚಲಾಯಿಸುತ್ತೇನೆ ಎಂದು ಘೋಷಿಸಿದರು.
ಇದು ಮತ್ತೊಂದು ರಾಜಕೀಯ ಸಾಧ್ಯಾಸಾಧ್ಯತೆಗಳಿಗೆ ಸಾಕ್ಷಿಯಾಯಿತು. ಇಂದು ಕೂಡ, ಯಾವುದೇ ಪಕ್ಷಕ್ಕೆ ತಾನು ಸೇರಿಲ್ಲ. ಇಂದು ಅಧಿಕಾರಕ್ಕಾಗಿ ಕೆಲವು ರಾಜಕಾರಣಿಗಳು ಏನೆಲ್ಲಾ ಕಸರತ್ತು ಮಾಡುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೇನೆ. ಯಾವತ್ತೂ ಕೂಡ ನೀತಿ, ತತ್ವ ಸಿದ್ಧಾಂತಗಳನ್ನು ನೋಡಿಕೊಂಡು ವರ್ತಿಸಿದವನು ತಾನು ಎಂದು ವರ್ತೂರು ಘೋಷಿಸಿದರು.
ಹಿಂದೆ ಬಿಜೆಪಿ ಪಾಳಯದಲ್ಲೇ ಇದ್ದು ಒಳಚರಂಡಿ ನಿಗಮದ ಅಧ್ಯಕ್ಷರಾಗಿದ್ದ ವರ್ತೂರು, ಆ ಬಳಿಕ ಬಿಜೆಪಿಯೊಂದಿಗೆ ಮುನಿಸಿಕೊಂಡು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೆ ಮರಳಿ ನಿಷ್ಠೆ ತೋರಿದ್ದರು. ಬಳಿಕ ಅವರು ಕುಮಾರಸ್ವಾಮಿ ಬಣ ಸೇರಿಕೊಂಡಿದ್ದರು. ಇದೀಗ ಪುನಃ ಬಿಜೆಪಿಗೆ ಬಂದಿದ್ದಾರೆ.