ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸ್ಪೀಕರ್, ಸಿಎಂ ಸ್ಥಾನ ಸುಗಂಧ ದ್ರವ್ಯದಿಂದ ಶುದ್ಧ ಮಾಡ್ಬೇಕು:ಗೌಡ (Deve gowda | BJP | JDS | Bangalore | KG Bopayya | Kumaraswamy)
Bookmark and Share Feedback Print
 
NRB
ರಾಜ್ಯ ರಾಜಕಾರಣದಲ್ಲಿ ಇಂತಹ ಭ್ರಷ್ಟ ಸರಕಾರವನ್ನು ನನ್ನ ಜೀವಮಾನದಲ್ಲೇ ಕಂಡಿಲ್ಲ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸ್ಪೀಕರ್ ಕುರ್ಚಿ ಅಪವಿತ್ರವಾಗಿದ್ದು, ಅದನ್ನು ಮೊದಲು ಸುಗಂಧ ದ್ರವ್ಯದಿಂದ ಸ್ವಚ್ಚಗೊಳಿಸಬೇಕು ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಬಿಜೆಪಿ ಸರಕಾರ ದೇಶದಲ್ಲಿಯೇ ನಂ.1 ಸ್ಥಾನ ಪಡೆದುಕೊಂಡಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಶಾಸಕರನ್ನು ಪ್ರಾಣಿ, ಪಕ್ಷಿಗಳಂತೆ ಖರೀದಿ ಮಾಡುತ್ತಿದ್ದಾರೆ. ಸರಕಾರಕ್ಕೆ ಮಾನ, ಮರ್ಯಾದೆ ಏನೂ ಇಲ್ಲ. ಇಂತಹ ನಿರ್ಲಜ್ಜ ಸರಕಾರದ ಆಡಳಿತವನ್ನು ಜನತೆ ಸಹಿಸಿಕೊಂಡು ಹೋಗಬೇಕಾಗಿ ಬಂದಿರುವುದು ದುರದೃಷ್ಟಕರ ಸಂಗತಿ ಎಂದರು.

ಇಂತಹ ದರಿದ್ರ ಸರಕಾರವನ್ನು ನೋಡ್ಕೊಂಡು ಆರ್ಎಸ್ಎಸ್, ಬಿಜೆಪಿ ನಾಯಕರು ಕುತ್ಕೊಂಡಿದ್ದಾರಲ್ಲಾ, ಅವರಿಗಾದರೂ ಬುದ್ದಿ ಬ್ಯಾಡ್‌ವೇನ್ರೀ ಎಂದು ಪ್ರಶ್ನಿಸಿದರು. ಸರಕಾರ ಹಾಗೂ ವಿಧಾನಸಭಾಧ್ಯಕ್ಷ ಬೋಪಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಗೌಡರು ಮಾತು,ಮಾತಿಗೆ ಅಯ್ಯೊ ದೇವರೇ ಅಯ್ಯೊಪಾಪ ಎಂದು ಉದ್ಗರಿಸುತ್ತಿದ್ದದ್ದು ವಿಶೇಷವಾಗಿತ್ತು.

ಕೆ.ಜಿ.ಬೋಪಯ್ಯರಂತಹ ಪಕ್ಷಪಾತಿ ಸ್ಪೀಕರ್ ಅನ್ನು ನಾನು ನೋಡಿಯೇ ಇಲ್ಲ. ಕೊಡಗಿನ ಜನತೆ ಶಿಸ್ತಿಗೆ ಹೆಸರುವಾಗಿಯಾಗಿದ್ದವರು. ಆದರೆ ಬೋಪಯ್ಯ ಇದಕ್ಕೆ ಹೊರತಾಗಿದ್ದಾರೆ ಎಂದರು. ವಿಧಾನಸಭೆ ಇತಿಹಾಸದಲ್ಲೇ ಸಮವಸ್ತ್ರ ಧರಿಸಿದ ಪೊಲೀಸರು ಸದನದ ಒಳಪ್ರವೇಶ ಮಾಡಿಸಿದ ಕೀರ್ತಿ ಕೂಡ ಬೋಪಯ್ಯ ಅವರಿಗೆ ಸಲ್ಲುತ್ತದೆ ಎಂದು ಮೂದಲಿಸಿದರು.

ಇಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ಮನೆಗೆ ಕಳುಹಿಸಬೇಕು. ಆಪರೇಶನ್ ಕಮಲ ಮುಂದುವರಿಸಿರುವ ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಆಡಳಿತ ನಡೆಸುವ ನೈತಿಕತೆಯೇ ಇಲ್ಲ, ಸರಕಾರಕ್ಕೆ ಬಹುಮತವೂ ಇಲ್ಲ. ಹಾಗಾಗಿ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ತೆರಳಬೇಕು ಎಂದು ಗೌಡರು ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ