ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಜತೆ ಸಿಜೆ ಖೇಹರ್: ಪ್ರಗತಿಪರರ ಪ್ರತಿಭಟನೆ (BJP | Yeddyurappa | High court | Khehar | Mysore Dasara)
Bookmark and Share Feedback Print
 
ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ದಸರಾ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದನ್ನು ವಿರೋಧಿಸಿ ಶನಿವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿವೆ.

ಬಂಡಾಯದ ಬಾವುಟ ಹಾರಿಸಿದ್ದ ಬಿಜೆಪಿ 11 ಶಾಸಕರ ಅನರ್ಹತೆಗೆ ಸಂಬಂಧಿಸಿ ತೀರ್ಪು ಪ್ರಕಟಿಸುವ ಹಿಂದಿನ ದಿನ ಪ್ರಕರಣದ ಪ್ರತಿವಾದಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಜತೆ ಮೈಸೂರಿನಲ್ಲಿ ಸಿಜೆ ಅವರು ವೇದಿಕೆ ಹಂಚಿಕೊಂಡಿದ್ದಲ್ಲದೆ, ಅರಮನೆ ಹಾಗೂ ಜೆಎಸ್ಎಸ್ ಮಠಕ್ಕೆ ಭೇಟಿ ಕೊಟ್ಟಿರುವ ಮುಖ್ಯನ್ಯಾಯಮೂರ್ತಿ ಖೇಹರ್ ಅವರ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಹಿಂದಿನ ದಿನ ಮುಖ್ಯಮಂತ್ರಿ ಜತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಜೆ ಅವರು ಮರುದಿನ ಸರಕಾರದ ಪರ ತೀರ್ಪು ನೀಡಿದ್ದಾರೆ. ಈ ನಡವಳಿಕೆ ಸಂಶಯವನ್ನು ಉಂಟು ಮಾಡಿದೆ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ತಿಳಿಸಿದ್ದಾರೆ. ನ್ಯಾಯಾಂಗ ಪವಿತ್ರವಾದದ್ದು, ಆದರೆ ನ್ಯಾಯಾಧೀಶರು ಜನರ ನಂಬಿಕೆಗೆ ಧಕ್ಕೆ ಬರುವ ಹಾಗೆ ನಡೆದುಕೊಂಡಿದ್ದಾರೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದರು.

ಇಂದು ನ್ಯಾಯಾಲಯದ ತೀರ್ಪುಗಳು ಕೆಲ ಹಿತಾಸಕ್ತಿಗಳಿಗೆ ಪೂರಕವಾಗಿ ಬರುತ್ತಿವೆ. ಶಾಸಕಾಂಗ ಮತ್ತು ಕಾರ್ಯಾಂಗಗಳು ಭ್ರಷ್ಟಾಚಾರದಲ್ಲಿ ತೊಡಗಿ ಜನರ ನಂಬಿಕೆ ಕಳೆದುಕೊಂಡಿದೆ. ಆ ನೆಲೆಯಲ್ಲಿ ನ್ಯಾಯಾಂಗ ಕೂಡ ಅದೇ ಹಾದಿ ಹಿಡಿಯುವ ಭೀತಿ ಮೂಡಿಸಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ