ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭತ್ಯೆ ಹೆಚ್ಚಳ: ರಾಜ್ಯ ಸರಕಾರಿ ನೌಕರರಿಗೆ 'ದೀಪಾವಳಿ ಉಡುಗೊರೆ' (BJP | Yeddyurappa | Bangalore | Govt Servent)
Bookmark and Share Feedback Print
 
ರಾಜ್ಯ ಸರಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಹೆಚ್ಚಳ ಮಾಡಿ ಸರಕಾರ ಗುರುವಾರ ಆದೇಶ ಹೊರಡಿಸುವ ಮೂಲಕ ದೀಪಾವಳಿಯ ಬಂಪರ್ ಕೊಡುಗೆ ನೀಡಿದಂತಾಗಿದೆ.

2010ರ ಜನವರಿ 1ರಿಂದಲೇ ಇದು ಜಾರಿಗೆ ಬರಲಿದೆ. ಬೆಂಗಳೂರು ನಗರದಲ್ಲಿ ಕೆಲಸ ಮಾಡುವ ನೌಕರರ ಮನೆ ಬಾಡಿಗೆ ಭತ್ಯೆಯನ್ನು ಶೇ.5ರಷ್ಟು ಹಾಗೂ ಇತರ ನಗರ ಮತ್ತು ಪಟ್ಟಣಗಳಲ್ಲಿ ಕೆಲಸ ಮಾಡುವ ನೌಕರರ ವೇತನವನ್ನು ಶೇ.1ರಷ್ಟು ಹೆಚ್ಚಿಸಲಾಗಿದೆ. ಬೆಂಗಳೂರು ನಗರದಲ್ಲಿ ಪ್ರಸ್ತುತ ಮೂಲ ವೇತನದ ಶೇ.20ರಷ್ಟು ಮನೆ ಬಾಡಿಗೆ ಭತ್ಯೆ ನೀಡುತ್ತಿದ್ದು, ಅದನ್ನು ಶೇ.25ಕ್ಕೆ ಏರಿಸಲಾಗಿದೆ.

ಇದೇ ರೀತಿ ಬಿ-1, ಬಿ-2 ನಗರಗಳಲ್ಲಿ ಶೇ.15ರಷ್ಟು ಇದ್ದು, ಅದನ್ನು ಶೇ.16ಕ್ಕೆ ಹೆಚ್ಚಿಸಲಾಗಿದೆ. ಸಿ ವರ್ಗದ ಪಟ್ಟಣಗಳಲ್ಲಿ ಶೇ.9ರಷ್ಟು ಭತ್ಯೆ ಪಡೆಯುತ್ತಿದ್ದು, ಅದನ್ನು ಶೇ.10ಕ್ಕೆ ಹಾಗೂ ಡಿ ವರ್ಗದ ಪಟ್ಟಣಗಳಲ್ಲಿ ಶೇ.6ರಿಂದ 7ಕ್ಕೆ ಏರಿಸಲಾಗಿದೆ. ಇ ವರ್ಗದ ಪಟ್ಟಣಗಳಲ್ಲಿ ಶೇ.5ರಷ್ಟು ನೀಡುತ್ತಿದ್ದು, ಅದನ್ನು ಶೇ.6ಕ್ಕೆ ಹೆಚ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ