ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೈ-ಕಾಲು ಕತ್ತರಿಸಿದ್ರೆ 1 ಲಕ್ಷ ರೂ.ಬಹುಮಾನ!: ಕಾರಂತ ಘೋಷಣೆ (Hindu Jagarana vedike | Jagadish karanth | Bagalkot | Hindu Temple)
Bookmark and Share Feedback Print
 
ಅನಧಿಕೃತ ದೇವಾಲಯಗಳ ತೆರವಿಗೆ ಬಾಗಲಕೋಟೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ದೇವಾಲಯಗಳ ಧ್ವಂಸಕ್ಕೆ ಮುಂದಾಗುವವರ ಕೈ-ಕಾಲು ಕತ್ತರಿಸಿ ಒಂದು ಲಕ್ಷ ರೂ. ಬಹುಮಾನ ಪಡೆಯಿರಿ ಎಂದು ಹಿಂದೂ ಜಾಗರಣ ವೇದಿಕೆ ರಾಜ್ಯ ಸಂಚಾಲಕ ಜಗದೀಶ ಕಾರಂತ ಘೋಷಿಸುವ ಮೂಲಕ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಪಟ್ಟಣದಲ್ಲಿ ನಗರಾಭಿವೃದ್ಧಿ ಇಲಾಖೆ ಅನಧಿಕೃತ ಹಿಂದೂ ದೇವಾಲಯಲಗಳ ತೆರವು ಕಾರ್ಯಾಚರಣೆಗೆ ಮುಂದಾಗಿರುವುದನ್ನು ವಿರೋಧಿಸಿ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಯವರು ದೇವಾಲಯಗಳನ್ನು ಕೆಡವಿ ಹಾಕಿರುವುದು ಹಿಂದೂಗಳ ಭಾವನೆಗಳನ್ನು ಕೆರಳಿಸಿದೆ ಎಂದರು.

ರಾಜ್ಯದ ಯಾವ ಸ್ಥಳದಲ್ಲೂ ದೇವಾಲಯಗಳ ತೆರವಿಗೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಕಾರಂತ, ಇಂಥ ಸಾಹಸಕ್ಕೆ ಕೈ ಹಾಕುವವರ ಕೈ, ಕಾಲು ಕತ್ತರಿಸಿ, ಅಂತಹವರಿಗೆ ಒಂದು ಲಕ್ಷ ರೂ. ಬಹುಮಾನ ಹಾಗೂ ನಿಮ್ಮ ಪರ ಉಚಿತ ವಕಾಲತ್ತು ವಹಿಸುವುದಾಗಿ ಹೇಳಿದರು.

ಈಗಾಗಲೇ ನಗರದಲ್ಲಿ ತೆರವುಗೊಳಿಸಿರುವ ದೇವಾಲಯಗಳನ್ನು ನ.15ರೊಳಗೆ ಪುನರ್ ಪ್ರತಿಷ್ಠಾಪನೆಗೆ ಮುಂದಾಗಬೇಕು. ಇಲ್ಲದಿದ್ದರೆ ಹಿಂದೂಗಳು ಕೈಯಲ್ಲಿ ಲಾಠಿ ಹಿಡಿದು ಬೀದಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎರಡು ದಿನಗಳ ಹಿಂದಷ್ಟೇ ಬಾಗಲಕೋಟೆ ನವನಗರದಲ್ಲಿ ನಗರಾಭಿವೃದ್ಧಿ ಆಡಳಿತ ಅನಧಿಕೃತ ದೇವಾಲಯಗಳ ತೆರವು ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಸುಮಾರು ಹತ್ತು ದೇವಾಲಯಗಳನ್ನು ಧ್ವಂಸಗೊಳಿಸಿತ್ತು. ಆದರೆ ಪ್ರಸಿದ್ಧ ಹನುಮಾನ್ ದೇವಾಲಯದ ತೆರವು ಕಾರ್ಯಾಚರಣೆಗೆ ಮುಂದಾದಾಗ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ದೇವಾಲಯ ತೆರವು ಕ್ರಮವನ್ನು ವಿರೋಧಿಸಿ ದೇವಾಲಯ ಸಂರಕ್ಷಣಾ ಸಮಿತಿ, ಹಿಂದೂಪರ ಸಂಘಟನೆಗಳು ಬಾಗಲಕೋಟೆ ಬಂದ್‌ಗೆ ಕೂಡ ಕರೆ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ