ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಖಂಡ ಹಾಗೂ ಸ್ವಾಭಿಮಾನಿ ಕರ್ನಾಟಕ ನಿರ್ಮಾಣ: ಸಿಎಂ (BJP | Yeddyurappa | Karnataka | Bangalore | education)
Bookmark and Share Feedback Print
 
ಅಖಂಡ ಹಾಗೂ ಸ್ವಾಭಿಮಾನಿ ಕರ್ನಾಟಕ ನಿರ್ಮಿಸುವ ಇಂಗಿತವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯೋತ್ಸವ ಸಮಾರಂಭದಲ್ಲಿ ವ್ಯಕ್ತಪಡಿಸಿದ್ದಾರೆ.

ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಸೇರಿದಂತೆ ಹಲವು ಭಾಗವಾಗಿ ಗುರುತಿಸಲ್ಪಡುವ ರಾಜ್ಯದ ನಾನಾ ಭಾಗವನ್ನು ಒಂದಾಗಿಸುವುದು ಹಾಗೂ ಅಖಂಡ ಕರ್ನಾಟಕವನ್ನು ಒಂದೇ ಹೆಸರಿನಿಂದ ಕರೆಯುವಂತೆ ಮಾಡಲು ಅಗತ್ಯ ಇರುವ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ರಾಜ್ಯದ ಕೆಲ ಭಾಗಕ್ಕೆ ಇದುವರೆಗೂ ಸೂಕ್ತ ರೀತಿಯಲ್ಲಿ ಸಲ್ಲಬೇಕಾದ ಗೌರವ ಸಂದಿಲ್ಲ. ಸಲ್ಲುತ್ತಲೂ ಇಲ್ಲ. ಇದನ್ನು ವ್ಯವಸ್ಥಿತಗೊಳಿಸಲು ಮುಂದಿನ ದಿನಗಳಲ್ಲಿ ಸರಕಾರ ಶ್ರಮಿಸಲಿದೆ. ಆಯಾ ಭಾಗಕ್ಕೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಭವಿಷ್ಯದ ಭಾರತ ನಿರ್ಮಾಣದಲ್ಲಿ ಭಾಗಿಯಾಗುವ ಮಕ್ಕಳ ಶಿಕ್ಷಣದಲ್ಲಿ ಪರ್ಯಾಯ ದಿಕ್ಕಿನಲ್ಲಿ ಜಾಗೃತಿ ಮೂಡಿಸುವ ಮಾದರಿಯ ಶಿಕ್ಷಣದ ಅಗತ್ಯ ಇದೆ. ಇದರಿಂದ ದೇಶಪ್ರೇಮವನ್ನು ಶಿಕ್ಷಣದಲ್ಲಿ ಅವಳಡಿಸುವ ಯೋಚನೆ ನಡೆಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಹಾಗೂ ಹೊಸತನದ ಅಳವಡಿಕೆ ಆಗಬೇಕಾದ ಅಗತ್ಯ ಇದೆ. ಅದು ಸರಕಾರದ ಗಮನಕ್ಕೆ ಬಂದಿದೆ ಎಂದರು.

ಮಕ್ಕಳು ರಾಜ್ಯದ ಮೇಲೆ ಪ್ರೀತಿ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಸಮೃದ್ಧ ಹಾಗೂ ಅಖಂಡ ಕರ್ನಾಟಕದ ಕನಸು ಕಾಣಲು ಸಾಧ್ಯ. ಕರ್ನಾಟಕ ಭೌಗೋಳಿಕವಾಗಿ ಒಗ್ಗೂಡಿದರೂ ಭಾವನಾತ್ಮವಾಗಿ ಒಗ್ಗೂಡಿಲ್ಲ. ಇದನ್ನು ಮಕ್ಕಳ ಮನಸ್ಸಿನಲ್ಲಿ ಪ್ರೀತಿ ಮೂಡಿಸುವ ಮೂಲಕ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ