ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಿಕ್ಷೆ ಬೇಡುತ್ತಿಲ್ಲ; ಸರಕಾರಕ್ಕೆ ಹೈಕೋರ್ಟ್ ತಪರಾಕಿ (High court | BJP | Yeddyurappa | HSR Colony | Bangalore)
Bookmark and Share Feedback Print
 
ನ್ಯಾಯಾಂಗದ ಮೂಲಭೂತ ಸೌಲಭ್ಯ ಯೋಜನೆಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡದೆ ತಾತ್ಸಾರ ತೋರುತ್ತಿರುವ ಸರಕಾರದ ಕ್ರಮಕ್ಕೆ ಹೈಕೋರ್ಟ್ ಚಾಟಿ ಏಟು ಕೊಟ್ಟಿದೆ.

ಎಚ್ಎಸ್ಆರ್ ಕಾಲೋನಿಯಲ್ಲಿರುವ ಆಟದ ಮೈದಾನವನ್ನು ನ್ಯಾಯಾಂಗ ಕಾಲೋನಿಯನ್ನಾಗಿ ಪರಿವರ್ತನೆ ಮಾಡುವುದಕ್ಕೆ ಸ್ಥಳೀಯರು ವಿರೋಧ ಮಾಡಿದ್ದರು. ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಇದಾದ ನಂತರ ನ್ಯಾಯಮೂರ್ತಿಗಳು ನಮಗೆ ಈ ಸ್ಥಳ ಬೇಡ, ಬೇರೆ ಒಂದು ಜಾಗ ನೀಡಬೇಕೆಂದು ಸರಕಾರಕ್ಕೆ ತಿಳಿಸಿದ್ದರು.

ಇದಕ್ಕಾಗಿಯೇ ಒಂದು ಸಮಿತಿಯನ್ನು ನೇಮಕ ಮಾಡಿ ಒಂದು ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ತಿಂಗಳು ಕಳೆದರೂ ಸಮಿತಿ ವರದಿ ಕೊಡದೆ ನಿರ್ಲಕ್ಷಿಸಿದ್ದಕ್ಕೆ ಅಸಮಾಧಾನಗೊಂಡ ನ್ಯಾಯಾಲಯ, ಈ ಸಂಬಂಧ ಅಡ್ವೊಕೇಟ್ ಜನರಲ್ ಅವರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡು ನ್ಯಾಯಾಂಗಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಸರಕಾರಕ್ಕೆ ತಾಕೀತು ಮಾಡಿದೆ.

2011 ಮಾರ್ಚ್ ಒಳಗೆ ನ್ಯಾಯಾಲಯಕ್ಕೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಇಲ್ಲದೆ ಹೋದಲ್ಲಿ ಸರಕಾರದ ಮಂತ್ರಿಗಳು ಮತ್ತು ಅಧಿಕಾರಿಗಳು ಮಾಡುತ್ತಿರುವ ಖರ್ಚು ವೆಚ್ಚದ ವಿವರಗಳನ್ನು ಬಹಿರಂಗಪಡಿಸುವುದು ಅನಿವಾರ್ಯವಾಗುತ್ತದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ ಎಂದು ವಕೀಲ ಅಮರನಾಥ್ ಹೇಳಿದರು.

ಸರಕಾರ ನ್ಯಾಯಾಂಗ ಕ್ಷೇತ್ರದ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ಕೊಡದೆ ಇರುವ ಕ್ರಮಕ್ಕಾಗಿ ಸರಕಾರವನ್ನು ಮುಖ್ಯನ್ಯಾಯಮೂರ್ತಿ ಖೇಹರ್ ತರಾಟೆಗೆ ತೆಗೆದುಕೊಂಡರು. ನಾವು ಭಿಕ್ಷೆ ಬೇಡುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಅನುಮೋದನೆ ಪಡೆದುಕೊಂಡ ಯೋಜನೆಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಸರಕಾರಕ್ಕೆ ತಪರಾಕಿ ಕೊಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ