ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿದ್ಯುತ್ ಪೂರೈಕೆ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ: ಕರಂದ್ಲಾಜೆ (Shobha karandlaje | Power station | BJP | Congress | Raichuru)
Bookmark and Share Feedback Print
 
ಆಂಧ್ರದ ಜುರಾಲಾ ಜಲ ವಿದ್ಯುತ್ ಯೋಜನೆಯಡಿ ರಾಜ್ಯದ ಪಾಲಿನ 110 ಮೆಗಾವ್ಯಾಟ್ ಪಡೆಯಲು 220 ಕೆ.ವಿ. ವಿದ್ಯುತ್ ಪೂರೈಕೆ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಶಕ್ತಿನಗರ ಅತಿಥಿ ಗೃಹದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಜುರಾಲಾ ಜಲ ವಿದ್ಯುದಾಗರದಿಂದ ರಾಯಚೂರು ತನಕ ಪೂರೈಕೆ ಮಾರ್ಗ ಹಾಕುತ್ತಿದ್ದು, 20 ಕೋಟಿ ರೂ. ಅಂದಾಜಿನ ಕಾಮಗಾರಿ ಕೆಪಿಟಿಸಿಎಲ್ ಕೈಗೆತ್ತಿಕೊಂಡಿದೆ.

ರಾಯಚೂರು 'ಪವರ್ ಹಬ್' ಎಂದು ಘೋಷಿಸಲು ಅಧಿಕಾರಿಗಳ ಜತೆ ಚರ್ಚಿಸಬೇಕಾಗಿದೆ. ಯದ್ಲಾಪೂರ ಘಟಕಕ್ಕೆ ಬೇಕಾದ ಕಲ್ಲಿದ್ದಲು ಪಡೆಯಬೇಕಾಗಿದ್ದು, ಕೇಂದ್ರ ಸರಕಾರ ಸೂಕ್ತ ಸಹಕಾರ ನೀಡುವ ವಿಶ್ವಾಸವಿದೆ. ಮೂರು ಘಟಕಗಳಿಗೆ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ ಬಳಕೆಯಾಗುತ್ತಿದ್ದು, ರಾಷ್ಟ್ರದಲ್ಲಿಯೇ ಎರಡನೇ ಪ್ರಯೋಗವಾಗಿದೆ.

ಹೊಸ ವಿದ್ಯುತ್ ಯೋಜನೆಯಿಂದ 2,400 ಮೆಗಾ ವ್ಯಾಟ್, ಆರ್‌ಟಿಪಿಎಸ್‌ನಿಂದ 1,720 ಮೆಗಾವ್ಯಾಟ್ ರಾಜ್ಯಕ್ಕೆ ಲಭ್ಯವಾಗಲಿದೆ. ಬೇಡಿಕೆಯಲ್ಲಿ ಶೇ.50ರಷ್ಟು ವಿದ್ಯುತ್ ಪೂರೈಕೆಗೆ ರಾಯಚೂರು ಸಮರ್ಥವಾಗಲಿದ್ದು, ಈ ಕಾರಣಕ್ಕೆ 'ಪವರ್ ಹಬ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.

ಶಾಖೋತ್ಪನ್ನ ಸ್ಥಾವರಗಳು ನೆಲೆಯೂರುವುದಕ್ಕೆ ಸಹಕರಿಸಿದ ಜಿಲ್ಲೆಗೆ ನಿರಂತರ 24 ತಾಸು ವಿದ್ಯುತ್ ಪೂರೈಕೆ ವಿಚಾರವೇನಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ, ಹಿಂದಿನ ಇಂಧನ ಖಾತೆ ಮಂತ್ರಿ ಕೆ.ಈಶ್ವರಪ್ಪ ನೀಡಿದ ಭರವಸೆ ತಮ್ಮ ಗಮನಕ್ಕೆ ಬಂದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ