ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಟಾಟಾ ಲಂಚ ಆರೋಪ: ಸಿಎಂ ಇಬ್ರಾಹಿಂ ಆತ್ಮಹತ್ಯೆ ಬೆದರಿಕೆ (Ratan Tata | C M Ibrahim | Civil Aviation Minister | Singapore Airllines | Bribe)
Bookmark and Share Feedback Print
 
NRB
ವಿಮಾನಯಾನ ಸಂಸ್ಥೆ ಸ್ಥಾಪಿಸಲು ಅನುಮತಿ ಕೇಳಿದಾಗ ಕೇಂದ್ರ ಸಚಿವರೊಬ್ಬರು 15 ಕೋಟಿ ರೂ. ಲಂಚ ಕೇಳಿದರು ಎಂಬ ಉದ್ಯಮಿ ರತನ್ ಟಾಟಾ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಅಂದಿನ ವಿಮಾನ ಯಾನ ಸಚಿವರಾಗಿದ್ದ ಸಿ.ಎಂ.ಇಬ್ರಾಹಿಂ, ಟಾಟಾ ಅವರು ಸಚಿವರ ಹೆಸರು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದರಲ್ಲದೆ, ಈ ಆರೋಪದ ಬಗ್ಗೆ ಸಿಬಿಐ ತನಿಖೆಯಾಗಲಿ, ಇಲ್ಲವಾದಲ್ಲಿ ತನಗೆ ಆತ್ಮಹತ್ಯೆ ಹೊರತು ಅನ್ಯ ಮಾರ್ಗವಿಲ್ಲ ಎಂದು ಹೇಳಿದ್ದಾರೆ.

ಎನ್‌ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ ಅಂದು ಜನತಾ ದಳದಲ್ಲಿದ್ದ, ಈಗಕಾಂಗ್ರೆಸ್ ಮುಖಂಡರಾಗಿರುವ ಇಬ್ರಾಹಿಂ, ಲಂಚ ಕೇಳಿದ ಸಚಿವರ ಹೆಸರು ಬಹಿರಂಗಪಡಿಸುವಂತೆ ರತನ್ ಟಾಟಾ ಅವರನ್ನು ಆಗ್ರಹಿಸಿದರು. ಈ ಆರೋಪದ ಕುರಿತು ಸಿಬಿಐ ತನಿಖೆ ಮಾಡಿಸುವಂತೆ ತಾನು ಪ್ರಧಾನಿಗೆ ಪತ್ರ ಬರೆಯುತ್ತೇನೆ. ಸತ್ಯ ಹೊರಬರಲಿ. ಇಲ್ಲವಾದಲ್ಲಿ ತನಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಹೊರತು ಬೇರೆ ದಾರಿಯೇ ಇಲ್ಲ ಎಂದರಲ್ಲದೆ, ನನ್ನಂತಹಾ ಪ್ರಾಮಾಣಿಕ ಮತ್ತು ರಾಷ್ಟ್ರೀಯವಾದಿ ರಾಜಕಾರಣಿಗಳಿಗೆ ಇಲ್ಲಿ ಬದುಕುವುದು ಸಾಧ್ಯವಿಲ್ಲವೇ ಎಂದು ಕೇಳಿದರು.

1996ರ-97ರ ಅವಧಿಯಲ್ಲಿ ದೇವೇಗೌಡ, ಇಂದ್ರ ಕುಮಾರ್ ಗುಜ್ರಾಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರು. ಅನುಮತಿ ಕೋರಿದಾಗ ಕೇಂದ್ರ ಸಚಿವರು 15 ಕೋಟಿ ರೂಪಾಯಿ ಲಂಚ ಕೇಳಿದ್ದರು. ಕೊನೆಗೆ ಮೂವರು ಪ್ರಧಾನಿಗಳ ಬಳಿಗೆ ಹೋದರೂ, ಪ್ರಭಾವೀ ವ್ಯಕ್ತಿಯೊಬ್ಬರು ತಮಗೆ ಅನುಮತಿ ದೊರೆಯದಂತೆ ತಡೆದರು ಎಂದು ರತನ್ ಟಾಟಾ ಸೋಮವಾರ ಬಾಂಬ್ ಸಿಡಿಸಿದ್ದರು. ಆದರೆ ಅವರು ಯಾರದೇ ಹೆಸರನ್ನು ಉಲ್ಲೇಖಿಸಿರಲಿಲ್ಲ.

ನನಗೆ 40 ಕೋಟಿ ರೂ. ಸಾಲ ಇದೆ. 8 ಮಕ್ಕಳ ತಂದೆಯಾಗಿ ಹೇಗೆ ಜೀವನ ಮಾಡುತ್ತಿದ್ದೇನೆ ಎಂದು ನನಗೇ ಗೊತ್ತು. ಹಣ ಇಲ್ಲದ್ದರಿಂದಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎಂದ ಅವರು, ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿ ಅವರು (ಟಾಟಾ ಕಂಪನಿ) ನನ್ನ ವಿರುದ್ಧ ಕೇಸು ಹಾಕಿದ್ದಾರೆ, ಅದಿನ್ನೂ ನ್ಯಾಯಾಲಯದಲ್ಲಿದೆ ಎಂದರು.

ಟಾಟಾ ಅವರು ಸಿಂಗಾಪುರ ಏರ್‌ಲೈನ್ಸ್ ಜೊತೆ ಸಹಯೋಗದಲ್ಲಿ ಏರ್‌ಲೈನ್ಸ್ ಸ್ಥಾಪಿಸುವ ಪ್ರಸ್ತಾವನೆ ಮುಂದಿಟ್ಟಿದ್ದರು. ಅದನ್ನು ನಾನು ನಿರಾಕರಿಸಿದೆ ಎಂದರು. ಯಾಕೆಂದರೆ ಆಗ, ವಿದೇಶೀ ವಿಮಾನ ಯಾನ ಸಂಸ್ಥೆಗಳಿಗೆ ದೇಶದಲ್ಲಿ ಅವಕಾಶ ಮಾಡಿಕೊಡಬಾರದು ಎಂಬುದು ಸರಕಾರದ ನಿರ್ಧಾರವಾಗಿತ್ತು. ಅದಕ್ಕೆ ವಿರುದ್ಧವಾಗಿ ಹೋಗಿಲ್ಲ. ಟಾಟಾ ಅವರೇ ವಿಮಾನಯಾನ ಸಂಸ್ಥೆ ಸ್ಥಾಪಿಸುವುದಾದರೆ ಅದಕ್ಕೆ ಅವಕಾಶ ಕೊಡುವುದಾಗಿಯೂ, ವಿದೇಶೀ ಏರ್‌ಲೈನ್ಸ್ ಕಂಪನಿಯನ್ನು ತರಬೇಡಿ ಎಂದೂ ಹೇಳಿದ್ದೆ ಎಂದ ಇಬ್ರಾಹಿಂ, ಅಂದು ಅವರು ಅನುಮತಿ ಕೋರಿದ್ದೇ ಇಂಡಿಯನ್ ಏರ್‌ಲೈನ್ಸ್ ಸಂಸ್ಥೆಯನ್ನು ಮುಳುಗಿಸುವ 'ಗುಪ್ತ ಅಜೆಂಡಾ'ದಿಂದ. ಆದರೆ ನಾನು ದೇಶಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಉಳಿಸಿದ್ದೇನೆ ಎಂದರು.

ಟಾಟಾ ಪ್ರಸ್ತಾಪಕ್ಕೆ ಅನುಮತಿ ಕೋರಿದ್ದ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಇಬ್ರಾಹಿಂ ಅವರು, "ನನ್ನ ಹೆಣದ ಮೇಲೆ ಅವರ ಈ ಪ್ರಸ್ತಾವನೆಗೆ ಅನುಮತಿ ದೊರೆಯಬಹುದು" ಎಂದು ಗರ್ಜಿಸಿದಾಗ, ಅಂದು ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಮತ್ತು ಕೈಗಾರಿಕಾ ಸಚಿವ ಮುರಸೋಳಿ ಮಾರನ್ ಅವರ ಬೆಂಬಲವಿದ್ದ ಹೊರತಾಗಿಯೂ, ಸರಕಾರವು ಅನುಮತಿ ನೀಡಲು ನಿರಾಕರಿಸುವಂತಾಗಿತ್ತು. ಟಾಟಾ ಕಂಪನಿಯು ವಿಮಾನಯಾನ ಕ್ಷೇತ್ರಕ್ಕೆ ಧುಮುಕದಂತೆ ಮಾಡಲು ಕೆಲವು ಕಂಪನಿಗಳು ಲಾಬಿ ನಡೆಸಿದ್ದವು ಎಂಬ ಆರೋಪಗಳೂ ಅಂದು ಕೇಳಿಬಂದಿದ್ದವು.
ಸಂಬಂಧಿತ ಮಾಹಿತಿ ಹುಡುಕಿ