ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕಾರಣದಲ್ಲಿ 'ನುಂಗಣ್ಣರೇ' ಹೆಚ್ಚಾಗಿದ್ದಾರೆ: ನ್ಯಾ.ನಾಯಕ್ (Human commission | BJP | Karnataka | Mangalore | yeddyurappa)
Bookmark and Share Feedback Print
 
ಜನಾದೇಶದ ವಿರುದ್ಧ ಕಾರ್ಯನಿರ್ವಹಿಸದಂತೆ ಪಕ್ಷಾಂತರ ಕಾಯ್ದೆಯನ್ನು ಕೇಂದ್ರ ಸರಕಾರ ಇನ್ನಷ್ಟು ಕಟ್ಟುನಿಟ್ಟುಗೊಳಿಸಬೇಕು. ಈ ಮೂಲಕ ರಾಜಕೀಯ ಚಿತ್ರಣ ಬದಲಾಯಿಸಬೇಕು ಎಂದು ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ನಗರದ ಪುರಭವನದಲ್ಲಿ ಮಹಾತ್ಮ ಗಾಂಧಿ ಶಾಂತಿ-ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾ ಘಟಕ ಉದ್ಘಾಟನೆ ಹಾಗೂ 'ಭಾರತದ ಸಂವಿಧಾನದ ಕಳೆದ 60 ವರುಷಗಳು' ವಿಷಯದ ಕುರಿತು ವಿಚಾರ ಸಂಕಿರಣ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜನ ಜಾಗೃತಿ ಮೂಲಕ ಜನಾಂದೋಲನ ರೂಪದಲ್ಲಿ ರಾಜಕೀಯ ವ್ಯವಸ್ಥೆ ಬದಲಾವಣೆ ಆಗಬೇಕು. ಜನ ಸಾಮಾನ್ಯರಿಗೆ ಗೌರವಯುತವಾಗಿ ಬದುಕಲು, ಸೂರು, ಕುಡಿಯಲು ನೀರು, ಆಹಾರ, ಆರೋಗ್ಯ, ಪರಿಶುದ್ಧ ಪರಿಸರ, ಭದ್ರತೆಯ ಹಕ್ಕನ್ನು ಪರಿಸರ ನೀಡಬೇಕು. ಆದರೆ ಬಡಜನರು ಈ ಎಲ್ಲ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಸಂವಿಧಾನ ನಮಗೆ ಎಲ್ಲ ಹಕ್ಕುಗಳನ್ನು ನೀಡಿದರೂ, ಅದನ್ನು ಸಮರ್ಪಕ ಅನುಷ್ಠಾನಗೊಳಿಸಲು ನಾವು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ರಾಜ್ಯ ಸರಕಾರ ನೆರೆ ಸಂತ್ರಸ್ತರಿಗೆ 6 ತಿಂಗಳಲ್ಲಿ 63,020 ಮನೆ ಕಟ್ಟಿಸಿಕೊಡುವ ಭರವಸೆ ನೀಡಿತ್ತು. ಆದರೆ ಇದುವರೆಗೆ ಒಂದೇ ಒಂದು ಮನೆ ನೀಡಿಲ್ಲ ಎಂದ ಅವರು, ಇದು ಮಾನವ ಹಕ್ಕು ಉಲ್ಲಂಘನೆ ಎಂದು ಆರೋಪಿಸಿದರು.

ತಾವೇ ನುಂಗುವ ವ್ಯವಸ್ಥೆ ಮಾಡಿಕೊಳ್ಳುವ ಕಳ್ಳರು, ದರೋಡೆಕೋರರನ್ನು ಕೇಳುವವರೇ ಇಲ್ಲದಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಮಂದಿ ಭೂರಹಿತರಿದ್ದಾರೆ. ಆದರೆ ರಾಜಕಾರಣಿಗಳು ಸ್ವಂತ ಭೂಮಿ ಮಾಡುತ್ತಿದ್ದಾರೆ ಹೊರತು ಬಡವರಿಗೆ ವಿತರಿಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ