ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗೌಡರ ಕುಟುಂಬದ ಭೂ ದಾಹ; ಬಿಜೆಪಿಯಿಂದ ದಾಖಲೆ ಬಿಡುಗಡೆ (Deve gowda | Kumaraswamy | Putta swamy | BJP | JDS)
Bookmark and Share Feedback Print
 
ಹಾಸನದ ಸುತ್ತಮುತ್ತ ಪ್ರದೇಶ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ದೇವೇಗೌಡರ ಕುಟುಂಬ ನೂರಾರು ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಕಬಳಿಕೆ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಜಿ.ಪುಟ್ಟಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭೂ ಹಗರಣ ರಾಜಕೀಯ ತಾರಕ್ಕೇರತೊಡಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾಸನ, ಅರಕಲಗೂಡು, ಮಾರಗೌಡನಹಳ್ಳಿ, ಗಾಳಿಪುರ ಕಾವಲು, ಕಾಮೇನಹಳ್ಳಿ, ಪಡುವಲಹಿಪ್ಪೆ, ಚಕ್ಕನಹಳ್ಳಿಯ ಗೋಮಾಳ, ಕೆರೆ ಸೇರಿದಂತೆ ಸುಮಾರು 82 ಎಕರೆ 1 ಗುಂಟೆ ಜಮೀನನ್ನು ದೇವೇಗೌಡರು ಕಬಳಿಕೆ ಮಾಡಿಕೊಂಡಿರುವುದಾಗಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ದೇವೇಗೌಡರ ಕುಟುಂಬ ಸರಕಾರಿ ಭೂಮಿ, ಕೆರೆ ಅಂಗಳ ಸೇರಿದಂತೆ ಅಕ್ರಮವಾಗಿ ಭೂಮಿಯನ್ನು ಕಬಳಿಕೆ ಮಾಡಿದೆ ಎಂದು ದೂರಿ, ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಅದೇ ರೀತಿ ಬಿಡದಿಯ ಕೇತಗಾನಹಳ್ಳಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ್ದ ಸುಮಾರು 24.31 ಗುಂಟೆ ಭೂಮಿಯನ್ನು ಕಾನೂನು ಬಾಹಿರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪರಭಾರೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಅಲ್ಲದೇ, ರಾಮನಗರದಲ್ಲಿಯೂ ಎಚ್‌ಡಿಕೆ ಅವರ ಚಿಕ್ಕಮ್ಮ ಸಾವಿತ್ರಮ್ಮ ಅವರ ಹೆಸರಿನಲ್ಲಿ 22 ಎಕರೆ ಭೂಮಿಯನ್ನು ಮಂಜೂರು ಮಾಡಿಸಿ, ನಂತರ ಅದನ್ನು ಕುಮಾರಸ್ವಾಮಿ ದಾನವಾಗಿ ಪಡೆದಿದ್ದಾರೆ ಎಂದು ಪುಟ್ಟಸ್ವಾಮಿ ವಿವರಿಸಿದರು.

ಎಸ್ಸಿ, ಎಸ್ಟಿ ಜಮೀನು ಪರಭಾರೆ ಮಾಡಿಕೊಂಡ ಬಗ್ಗೆ ರಾಮನಗರ ತಹಶೀಲ್ದಾರ್ ಅಂದು ವರದಿ ನೀಡಿದ್ದರು. ಆದರೆ ಗೌಡರ ಕುಟುಂಬ ಜಮೀನು ಅತಿಕ್ರಮಣ ಮಾಡಿಕೊಂಡ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಅವೆಲ್ಲವನ್ನೂ ಗೌಡರ ಕುಟುಂಬವೇ ವ್ಯವಸ್ಥಿತವಾಗಿ ನಾಶ ಮಾಡಿದೆ ಎಂದು ದೂರಿದರು.

ಎಚ್‌ಡಿಕೆ-ಪುಟ್ಟಸ್ವಾಮಿ ನಡುವೆ ಬೈಗುಳದ ಸುರಿಮಳೆ:
ದೇವೇಗೌಡರ ಕುಟುಂಬ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನೂರಾರು ಎಕರೆ ಭೂಮಿಯನ್ನು ಸಂಪಾದಿಸಿರುವುದಾಗಿ ಪುಟ್ಟಸ್ವಾಮಿ ಅವರು ದಾಖಲೆ ಬಿಡುಗಡೆ ಮಾಡಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕುಮಾರಸ್ವಾಮಿ ಅವರನ್ನು ಮಾಧ್ಯಮವೊಂದು ಪ್ರಶ್ನಿಸಿದಾಗ, ನಾವು ಯಾವುದೇ ರೀತಿಯಲ್ಲೂ ಅಕ್ರಮವಾಗಿ ಆಸ್ತಿಯನ್ನು ಕಬಳಿಸಿಲ್ಲ. ಒಂದು ವೇಳೆ ಆ ರೀತಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದರೆ ಸರಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ನೇರವಾಗಿ ಸವಾಲು ಹಾಕಿದರು.

ತದನಂತರ ಟಿವಿ9 ಸ್ಟುಡಿಯೋದಲ್ಲಿ ಬಿಜಿ ಪುಟ್ಟಸ್ವಾಮಿ ಅವರು ಗೌಡರ ಕುಟುಂಬದ ಭೂ ದಾಹ ಕಬಳಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ, ಆ ಸಂದರ್ಭದಲ್ಲಿ ದೂರವಾಣಿ ಮೂಲಕ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡುತ್ತಿದ್ದಾಗ ನಾವು ಅಕ್ರಮವಾಗಿ ಭೂಮಿ ಸಂಪಾದಿಸಿದ್ದರೆ ಅದನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದರು.

ಆಗ ಪುಟ್ಟಸ್ವಾಮಿ ಜತೆ ನೀವೇ ಮಾತನಾಡಿ ಎಂದಾಗ, ಹೋಗ್ರಿ...ಆ ಪೋಲಿ ಹತ್ತಿರ ಏನ್ ಮಾತಾಡೋದು. ಪಾಪರ್‌ಚೀಟಿ(ದಿವಾಳಿಯಾದ) ತಗೊಂಡವನ ಪ್ರಶ್ನೆಗೆಲ್ಲಾ ಉತ್ತರ ಕೊಡಲಿಕ್ಕೆ ನಾನು ಇದ್ದಿದ್ದಲ್ಲ ಎಂದು ಏಕಾಏಕಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಆಗ ಪುಟ್ಟಸ್ವಾಮಿ, ಏಯ್ ಮರ್ಯಾದೆ ಕೊಟ್ಟು ಮಾತನಾಡು, ಮರ್ಯಾದೆ ಕೊಟ್ಟು, ಮರ್ಯಾದೆ ತಗೊಳ್ಳೋದನ್ನು ಕಲಿತುಕೊ ಎಂದಾಗ, ತಾಳ್ಮೆಗೆಟ್ಟ ಕುಮಾರಸ್ವಾಮಿ, ಮುಚ್ಚಲೇ ನಿನ್ನ ಜತೆ ನನಗೇನು ಮಾತು ಅಂತ ಲೈನ್ ಕಟ್ ಮಾಡಿದರು.

ಏನ್ರಿ ಮಾಜಿ ಮುಖ್ಯಮಂತ್ರಿಯಾದವರು ಈ ರೀತಿ ಮಾತಾಡೋದು. ನನ್ನ ವಯಸ್ಸೆಷ್ಟು, ಇವನ ವಯಸ್ಸೆಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದ ಪುಟ್ಟಸ್ವಾಮಿ, ಇವರ ಗೊಡ್ಡು ಬೆದರಿಕೆಗೆ ಹೆದರುವವ ನಾನಲ್ಲ. ಇವರ ಯೋಗ್ಯತೆ ಏನು ಅಂತ ನನಗೆ ಚೆನ್ನಾಗಿ ತಿಳಿದಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ