ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇಬ್ರಾಹಿಂ ಕಾಂಗ್ರೆಸ್ಸಿಗನಲ್ಲ, ಜೆಡಿಎಸ್ ಮೈತ್ರಿ ಬೇಡ: ವಿಶ್ವನಾಥ್ (H Vishwanath | CM Ibrahim | Congress | Sidharamaih)
Bookmark and Share Feedback Print
 
ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಬಂದಿರುವ ನಾಯಕರು ಜೆಡಿಎಸ್ ಜತೆ ಮೈತ್ರಿಗೆ ಒಲವು ತೋರಿಸುತ್ತಿರುವುದನ್ನು ತೀವ್ರವಾಗಿ ವಿರೋಧಿಸಿರುವ ಸಂಸದ ಎಚ್. ವಿಶ್ವನಾಥ್, ಸಿ.ಎಂ. ಇಬ್ರಾಹಿಂ ವಿರುದ್ಧ ಕಿಡಿ ಕಾರಿದ್ದಾರೆ.

ಈಗ ಕಾಂಗ್ರೆಸ್ ನಾಯಕರೆಂದು ಹೇಳಿಕೊಳ್ಳುತ್ತಿರುವ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ಸಿನವರಲ್ಲ. ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಪಡೆದಿಲ್ಲ. ಹಾಗಾಗಿ ಅವರು ಕಾಂಗ್ರೆಸ್ ಪರ ಮಾತನಾಡಕೂಡದು ಎಂದು ಭಾನುವಾರ ಮೈಸೂರಿನಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಾ ತಿಳಿಸಿದರು.

ಕಾಂಗ್ರೆಸ್‌ ಸದಸ್ಯರಾಗದ ಹೊರತು ಅವರಿಗೆ ಪಕ್ಷದ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ. ಅವರು ಕಾಂಗ್ರೆಸ್ ಪರವಾಗಿ ಯಾವುದೇ ಹೇಳಿಕೆ ನೀಡಲು ಅರ್ಹರಲ್ಲ ಎಂದು ವಿಶ್ವನಾಥ್ ಅಭಿಪ್ರಾಯಪಟ್ಟರು.

ವಿಶ್ವನಾಥ್ ವಾಗ್ದಾಳಿ ಕೇವಲ ಇಬ್ರಾಹಿಂ ಅವರಿಗೆ ಸೀಮಿತವಾಗಿರಲಿಲ್ಲ. ಅವರು ಜನತಾ ಪರಿವಾರದಿಂದ ಬಂದ ಪ್ರತಿಯೊಬ್ಬ ನಾಯಕನ ಮೇಲೂ ಆರೋಪಗಳ ಸುರಿಮಳೆಯನ್ನೇ ಸುರಿಸಿದರು. ಅವರಲ್ಲಿ ಪ್ರಮುಖರಾದವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಹಿರಿಯ ನಾಯಕ ಕೋದಂಡರಾಮಯ್ಯ.

ಮೂಲಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಬಂದಿರುವ ವಲಸಿಗರು ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಉತ್ಸುಕರಾಗಿದ್ದಾರೆ. ಆದರೆ ಅವರಿಗೆ ಈ ಕುರಿತು ಮಾತನಾಡುವ ಯಾವುದೇ ಹಕ್ಕನ್ನು ಅಥವಾ ಅನುಮತಿಯನ್ನು ಹೈಕಮಾಂಡ್ ಕೊಟ್ಟಿಲ್ಲ. ಮೈತ್ರಿಗೆ ಕಾಂಗ್ರೆಸ್ ವರಿಷ್ಠರು ಒಪ್ಪಿಗೆ ಸೂಚಿಸಿಲ್ಲ. ಅವರಿಗೆ ಜೆಡಿಎಸ್ ಕುರಿತು ಒಲವು ಇರಬಹುದು. ಅದೇ ಕಾರಣಕ್ಕೆ ಮೈತ್ರಿಗೆ ಆಸಕ್ತಿ ತೋರಿಸುತ್ತಿದ್ದಾರೆ ಎಂದರು.

ವಿಶ್ವನಾಥ್ ಮಾತು ರಾಜ್ಯದಲ್ಲಿ ಮೆರೆದಾಡುತ್ತಿರುವ ಭ್ರಷ್ಟಾಚಾರದ ಮೇಲೂ ಹರಿದಾಡಿತು. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ನಡೆಸುತ್ತಿರುವ ಹೋರಾಟದ ಬಗ್ಗೆ ತೀಕ್ಷ್ಣವಾಗಿ ಟೀಕಿಸಿದರು. ಕರ್ನಾಟಕದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದರೆ ಅದಕ್ಕೆ ಕುಮಾರಸ್ವಾಮಿಯವರೇ ಕಾರಣರು ಎಂದು ಆರೋಪಿಸಿದರು.

ಅದೇ ಹೊತ್ತಿಗೆ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಕೋದಂಡರಾಮಯ್ಯ, ತಾನು ಹಿಂದಿನಿಂದಲೂ ಜೆಡಿಎಸ್ ಜತೆಗಿನ ಮೈತ್ರಿಯನ್ನು ವಿರೋಧಿಸುತ್ತಾ ಬಂದವನು; ಬಿಜೆಪಿಯಷ್ಟೇ ಭ್ರಷ್ಟ ಪಕ್ಷ ಜೆಡಿಎಸ್. ಅದರ ಜತೆ ಯಾವುದೇ ಹೊಂದಾಣಿಕೆಯನ್ನು ನಾನು ಸತತವಾಗಿ ವಿರೋಧಿಸುತ್ತಿದ್ದೇನೆ. ವಿಶ್ವನಾಥ್ ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ