ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಪಕ್ಷದ ನಾಯಕರಂತೆ ವರ್ತಿಸುತ್ತಿದ್ದಾರೆಂದು ಬಿಜೆಪಿ ಆರೋಪಿಸುತ್ತಿದ್ದರೆ, ಮತ್ತೊಂದೆಡೆ ರಾಜ್ಯಪಾಲರ ಮೂಲಕ ಸರಕಾರವನ್ನು ಉರುಳಿಸಲು ಸಿಡಿಯನ್ನು ಮಾಡಿಸಿದ್ದು ನಾನೇ ಎಂಬುದಾಗಿ ಸಚಿವ ಜನಾರ್ದನ ರೆಡ್ಡಿ ಬಹಿರಂಗಪಡಿಸಿದ್ದಾರೆ.
ಮಂಗಳವಾರ ಸಂಜೆ ನಗರದ ಹೊರವಲಯ ರೆಸಾರ್ಟ್‌ವೊಂದರಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರೆಡ್ಡಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಆ ಸಿಡಿಯಲ್ಲಿನ ದೃಶ್ಯಗಳನ್ನು ಸೆರೆ ಹಿಡಿದದ್ದು ಬೇರಾರು ಅಲ್ಲ. ನಾನೇ ಅದಕ್ಕೆ ವ್ಯವಸ್ಥೆ ಮಾಡಿದ್ದೆ. ಒಬ್ಬ ಗಣ್ಯ ವ್ಯಕ್ತಿಯನ್ನು ಸಿಕ್ಕಿಸಲೆಂದೇ ಆ ತಂತ್ರವನ್ನು ರೂಪಿಸಿದ್ದೆ. ಆ ಬಗ್ಗೆ ಅನುಮಾನ ಬೇಡ. ಅಲ್ಲದೇ ಆ ಸಿಡಿಯ ಪ್ರತಿಯನ್ನು ಮುಖ್ಯಮಂತ್ರಿಗಳ ವೀಕ್ಷಣೆಗಾಗಿ ನೀಡಿದ್ದೆ.
ಆದರೆ ಆ ಸಿಡಿಯನ್ನು ಏಕಾಏಕಿಯಾಗಿ ಮಾಧ್ಯಮಗಳಿಗೆ ಬಿಡುಗಡೆಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡಿದೆ ಎಂದು ವಿವರಣೆ ನೀಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.