ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಅಧಿಕಾರ ಕಳೆದುಕೊಂಡು ಶಿಕಾರಿಪುರಕ್ಕೆ ವಾಪಸ್ : ಯತ್ನಾಳ್ (Chief minister Yatnal , Yediyurappa)
Bookmark and Share Feedback Print
 
ಬಿಜೆಪಿ ಸರಕಾರದ ಭ್ರಷ್ಟಾಚಾರ, ಪಕ್ಷದ ಶಾಸಕರ ಭಿನ್ನಮತದಿಂದ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಚುಣಾವಣೆ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಹೊಸದಿಲ್ಲಿ ರಾಜಕಾರಣದ ಬದಲು ಅಧಿಕಾರ ಕಳೆದುಕೊಂಡು ನೇರವಾಗಿ ಶಿಕಾರಿಪುರಕ್ಕೆ ಹೋಗಲಿದ್ದಾರೆ ಎಂದು ಜೆಡಿಎಸ್ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯವನ್ನು ಹಾಳುಮಾಡಿದ ಯಡಿಯೂರಪ್ಪ ದೇಶ ಮಾರಲು ಹೊಸದಿಲ್ಲಿಗೆ ತೆರಳಲು ಮುಂದಾಗಿದ್ದಾರೆ. ಹಿಂದಿ, ಇಂಗ್ಲಿಷ್ ಬಾರದ ಅವರು ಹೊಸದಿಲ್ಲಿ ಬದಲು ನೇರವಾಗಿ ಶಿಕಾರಿಪುರಕ್ಕೆ ತೆರಳಿ ಶಾಶ್ವತವಾಗಿ ಮನೆಯಲ್ಲಿ ಕೂರಲಿದ್ದಾರೆ ಎಂದರು.

ಯಡಿಯೂರಪ್ಪ ಸರಕಾರದ ಭ್ರಷ್ಟಾಚಾರ, ದುರಾಡಳಿತ ನೋಡಿ ಬೇಸರಗೊಂಡ ರಾಜ್ಯದ ಜನತೆ ಮತ್ತೆ ಕುಮಾರಸ್ವಾಮಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. 2011ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ತಮ್ಮ ಪಕ್ಷ ಜಿಪಂ ಚುನಾವಣೆ ಮೂಲಕ ಸಜ್ಜಾಗುತ್ತಿದೆ ಎಂದರು.

ವಿಧಾನಸಭೆ ವಿಸರ್ಜನೆಯಾದರೆ ಕಾಂಗ್ರೆಸ್‌ನ ಬಹುತೇಕ ಶಾಸಕರು ಜೆಡಿಎಸ್ ಸೇರುವ ತುಡಿತದಲ್ಲಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಹ ತಮ್ಮ ಪಕ್ಷಕ್ಕೆ ಬರಲಿದ್ದಾರೆ ಎಂದು ಯತ್ನಾಳ ಭವಿಷ್ಯ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ