ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಭಿವೃದ್ಧಿಯಾಗಿರುವುದು ರಾಜ್ಯವಲ್ಲ, ಸಿಎಂ ಕುಟುಂಬ: ಎಚ್‌ಡಿಕೆ (HD Kumaraswamy | BS Yeddyurappa | JDS | BJP)
Bookmark and Share Feedback Print
 
ಕರ್ನಾಟಕ ಅಭಿವೃದ್ಧಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೋದಲ್ಲೆಲ್ಲ ಹೇಳುತ್ತಿದ್ದಾರೆ. ಆದರೆ ನಿಜಕ್ಕೂ ಅಭಿವೃದ್ಧಿಯಾಗಿರುವುದು ಅವರ ಕುಟುಂಬ-- ಬ್ರಹ್ಮ, ವಿಷ್ಣು, ಮಹೇಶ್ವರರಂತಿರುವ ಅವರ ಮಕ್ಕಳು ಮತ್ತು ಅಳಿಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ನಾಗಮಂಡಲದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ಅಭಿವೃದ್ಧಿ ಅಭಿವೃದ್ಧಿ ಎಂದು ಸಾರುತ್ತಿರುವ ಯಡಿಯೂರಪ್ಪ ಬ್ರಹ್ಮ, ವಿಷ್ಣು, ಮಹೇಶ್ವರರಂತಿರುವ ರಾಘವೇಂದ್ರ, ವಿಜಯೇಂದ್ರ ಮತ್ತು ಸೋಹನ್ ಕುಮಾರ್ ಅವರ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದಾರೆ ಎಂದು ಟೀಕಿಸಿದರು.

ಇತ್ತೀಚೆಗಷ್ಟೇ ಬಿಜೆಪಿ ರಾಜ್ಯ ಘಟಕದ ಜಾಹೀರಾತಿನಲ್ಲಿ ಉಂಟಾದ ಆವಾಂತರವನ್ನೂ ಕುಮಾರಸ್ವಾಮಿ ಕೆದಕಿದರು. ಆತ್ಮಹತ್ಯೆ ಮಾಡಿಕೊಂಡ ರೈತನ ಭಾವಚಿತ್ರವನ್ನು ಪ್ರಕಟಿಸಿ, ರೈತರ ಜೀವನ ಪಾವನವಾಗಿದೆ ಎಂಬ ಜಾಹೀರಾತನ್ನು ಕೊಟ್ಟ ಸರಕಾರದ್ದು ಕೀಳುಮಟ್ಟದ ರಾಜಕಾರಣ ಎಂದರು.

ಯಡಿಯೂರಪ್ಪನವರ ಹಗರಣಗಳ ಕುರಿತು ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದರೂ ಅವರಿಗೆ ಒಂಚೂರು ನಾಚಿಕೆಯಿಲ್ಲ, ಅವರು ಕುರ್ಚಿ ಬಿಟ್ಟು ಅಲುಗಾಡುತ್ತಿಲ್ಲ. ಅಂತವರಿಗೆ ಬೇರೆಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದರು.

ದೇವೇಗೌಡರ ಕುಟುಂಬದ ಅಕ್ರಮ ಆಸ್ತಿಯನ್ನು ಬಡವರಿಗೆ ಹಂಚುತ್ತೇನೆ, ಅವರು ಭಾರೀ ಅಕ್ರಮ ಆಸ್ತಿ ಮಾಡಿದ್ದಾರೆ ಎಂದೆಲ್ಲ ಆರೋಪಿಸಿದರು. ನನ್ನ ಮೇಲೆಯೇ ಸಾಕಷ್ಟು ಆರೋಪಗಳನ್ನು ಮಾಡಿದರು. ಆಗ ನಾನು ಮಠಾಧೀಶರೊಬ್ಬರ ಮುಂದೆ ಇದನ್ನು ಚರ್ಚಿಸಲು ಮುಂದಾಗಿದ್ದೆ. ಆದರೆ ಮುಖ್ಯಮಂತ್ರಿಗಳು ಅದರಿಂದ ತಪ್ಪಿಸಿಕೊಂಡರು ಎಂದು ಬಹಿರಂಗಪಡಿಸಿದರು.

ತಾನು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದೆ ಎಂದು ಜನತೆಯ ಕಿವಿತುಂಬಿದ ಜೆಡಿಎಸ್ ನಾಯಕ, ಬಿಜೆಪಿ ಮತ್ತು ಕಾಂಗ್ರೆಸ್‌ಗಳನ್ನು ಸೋಲಿಸಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ