ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರತ್ಯೇಕ ತೆಲಂಗಾಣಕ್ಕಿಂತ ಅಖಂಡ ಆಂಧ್ರವೇ ಸೂಕ್ತ: ಪುರಂದರೇಶ್ವರಿ (Congress | Andhra pradesh | Purandeshwari | UPA | Karnataka)
ಪ್ರತ್ಯೇಕ ತೆಲಂಗಾಣಕ್ಕಿಂತ ಅಖಂಡ ಆಂಧ್ರವೇ ಸೂಕ್ತ: ಪುರಂದರೇಶ್ವರಿ
ಹೊಸಪೇಟೆ, ಬುಧವಾರ, 29 ಡಿಸೆಂಬರ್ 2010( 15:09 IST )
ತೆಲಂಗಾಣ ರಾಜ್ಯ ನಿರ್ಮಾಣಕ್ಕಿಂತಲೂ ಅಖಂಡ ಆಂಧ್ರವೇ ಸೂಕ್ತ. ರಾಜ್ಯ ವಿಭಜನೆ ಅನಗತ್ಯ ಎಂದು ಕೇಂದ್ರದ ಮಾನವ ಸಂಪನ್ಮೂಲ ರಾಜ್ಯ ಸಚಿವೆ ಡಿ.ಪುರಂದರೇಶ್ವರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತೆಲಂಗಾಣ ರಾಜ್ಯ ರಚನೆ ಕುರಿತು ಶ್ರೀಕೃಷ್ಣ ಆಯೋಗ ಡಿ.31ರಂದು ವರದಿ ಸಲ್ಲಿಸಲಿದೆ. ಈ ವರದಿ ಪರವಾಗಿರಲಿ ಅಥವಾ ವಿರುದ್ಧವಾಗಿರಲಿ ಜನ ಶಾಂತಿ ಕಾಪಾಡಬೇಕು. ಒಗ್ಗಟ್ಟಿನ ದೃಷ್ಟಿಯಿಂದ ವಿಶಾಲ ಆಂಧ್ರವೇ ಸೂಕ್ತವಾಗಿದ್ದು, ಪ್ರತ್ಯೇಕ ರಾಜ್ಯದ ಪರವಿದ್ದವರು ಮರು ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ಆಂಧ್ರ ಸರಕಾರ ತೆಲಂಗಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಹಂತ ಹಂತವಾಗಿ ಜನರಿಗೆ ಮೂಲ ಸೌಕರ್ಯ ಒದಗಿಸುತ್ತಿದೆ. ಆದರೂ, ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿರುವುದು ಸರಿಯಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ವೈಎಸ್ಆರ್ ಪುತ್ರ ಜಗನ್ ರೆಡ್ಡಿ ಕಾಂಗ್ರೆಸ್ ತೊರೆದಿರುವುದರಿಂದ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆನೂರಾರು ವರ್ಷದ ಇತಿಹಾಸವಿದೆ. ಬೇರೆ ಪಕ್ಷದ ನಾಯಕರು ಪಕ್ಷಕ್ಕೆ ಬರುತ್ತಿದ್ದಾರೆ. ಅಷ್ಟಕ್ಕೂ ಪಕ್ಷದಲ್ಲಿ ನಾಯಕರಿಗೆ ಕೊರತೆ ಇಲ್ಲ ಎಂದು ಹೇಳಿದರು.