ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 20 ರೂಪಾಯಿಗಾಗಿ ಮೊಮ್ಮಗಳನ್ನೇ ಮೋರಿಗೆ ಎಸೆದ ಅಜ್ಜಿ! (Bangalore | Yasahavanth pur | Police | Grand mother)
Bookmark and Share Feedback Print
 
ತನ್ನ ಖರ್ಚಿಗೆ ಮಗಳು ಇಪ್ಪತ್ತು ರೂಪಾಯಿ ನೀಡಲಿಲ್ಲ ಎಂದು ಸಿಟ್ಟುಗೊಂಡ ತಾಯಿ ಎರಡು ವರ್ಷದ ಮೊಮ್ಮಗಳನ್ನು ಮೋರಿಗೆ ಎಸೆದ ಅವಮಾನೀಯ ಘಟನೆ ಯಶವಂತಪುರದ ಗೋಕುಲ ಬಡಾವಣೆಯಲ್ಲಿ ಗುರುವಾರ ನಡೆದಿದೆ.

ಮೋರಿಗೆ ಬಿದ್ದ ಕಂದಮ್ಮನನ್ನು ಸ್ನೇಹಸಂಗಮ ಮಹಿಳಾ ಸಂಘಟನೆಯ ಕಾರ್ಯಕರ್ತರು ರಕ್ಷಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಮಗು ಮೇಘನಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಗೋಕುಲ ಬಡಾವಣೆ ಮೊದಲನೇ ಹಂತದಲ್ಲಿ ನಾಗರತ್ನಾ ಎಂಬುವರ ವಾಸವಿದ್ದು, ಅವರು ಸಿದ್ದ ಉಡುಪು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಾಗರತ್ನಾ ಅವರ ತಾಯಿ ಲಕ್ಷ್ಮಮ್ಮ (65) ಅವರು ಮಗಳು ಕೆಲಸಕ್ಕೆ ಹೋದಾಗ ಮೊಮ್ಮಗಳು ಮೇಘನಾಳನ್ನು ನೋಡಿಕೊಳ್ಳುತ್ತಿದ್ದರು. ಲಕ್ಷ್ಮಮ್ಮನಿಗೆ ಮದ್ಯಪಾನ ಮಾಡುವ ಚಟವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗುರುವಾರ ಸಂಜೆ ಕೆಲಸದಿಂದ ಮನೆಗೆ ಬಂದ ಮಗಳಲ್ಲಿ ಲಕ್ಷ್ಮಮ್ಮ 20 ರೂಪಾಯಿ ಕೊಡುವಂತೆ ಕೇಳಿದರು. ಆದರೆ ನಾಗರತ್ನಾ ಹಣ ಕೊಡಲು ನಿರಾಕರಿಸಿದರು. ಎಷ್ಟೇ ಹಠ ಹಿಡಿದರೂ ಮಗಳು ಹಣ ನೀಡಲಿಲ್ಲ. ಇದರಿಂದ ಕುಪಿತಗೊಂಡ ಲಕ್ಷ್ಮಮ್ಮ ಮೇಘನಾಳನ್ನು ಹೊತ್ತೊಯ್ದು ಮನೆಯ ಸಮೀಪದ ಮೋರಿಗೆ ಎಸೆದಿದ್ದರು.

ಆ ಸಂದರ್ಭದಲ್ಲಿ ಅಲ್ಲಿ ನಿಂತಿದ್ದ ಸ್ನೇಹಸಂಗಮ ಸಂಘಟನೆಯ ಕಾರ್ಯಕರ್ತರಾದ ಮೀನಮ್ಮ, ಜಯಲಕ್ಷ್ಮಿ ಮತ್ತಿತರರು ಕೂಡಲೇ ಮಗುವನ್ನು ಮೋರಿಯಿಂದ ಮೇಲಕ್ಕೆತ್ತಿ ಯಶವಂತಪುರದ ಖಾಸಗಿ ಕ್ಲಿನಿಕ್‌ಗೆ ದಾಖಲಿಸಿದರು. ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಮೇಘನಾಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ